ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಕೊರೋನಾದಿಂದಾಗಿ ಸಾವನ್ನಪ್ಪಿ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಬಂದ ಜನ ಮೃತ ದೇಹದ ಅಂತ್ಯಕ್ರಿಯೆ ನಡೆಸುತ್ತಿರುವುದನ್ನು ತಮ್ಮ ಮುಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ನಗರದ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ಬರುವ ಸ್ಮಶಾನದ ಗೇಟಿಗೆ ಮುಳ್ಳು ಕಡ್ಡಿ ಮುಚ್ಚಿ ದ್ದಲ್ಲದೇ ಸ್ಮಶಾನದ ಗೇಟ್ ನ್ನು ಬಂದ್ ಮಾಡಿದ್ದಾರೆ. ಇನ್ನು ಈ ಸ್ಮಶಾನದಲ್ಲಿ ಕೊರೋನಾ ಹಾವಳಿ ಮುಗಿಯುವ ವರೆಗೂ ಯಾರೂ ಅಂತ್ಯಕ್ರಿಯೆ ಮಾಡುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ…