ದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೊತೆಗೆ ಸಶಸ್ತ್ರ ಪಡೆಗಳ ಧೈರ್ಯ ಕುಗ್ಗಿಸುವ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಫತೇಶ್ ಕುಮಾರ್ ಶಾಹು, ಮೊಹಮ್ಮದ್ ಜುನೈದ್ ಮತ್ತು ವಿಕ್ಕಿ ಕುಮಾರ್ ಎಂಬುವವರು ಈ ಕುರಿತು ಸುಪ್ರೀಂಕೊರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ “ಪ್ರತಿಯೊಬ್ಬ ನಾಗರಿಕನು ಭಯೋತ್ಪಾದನೆಯ ವಿರುದ್ಧ ಕೈಜೋಡಿಸಿದ ನಿರ್ಣಾಯಕ ಸಮಯ ಇದು. ಇಂತಹ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಶಸ್ತ್ರ ಪಡೆಗಳ ಸ್ಥೈರ್ಯ ಕುಗ್ಗಿಸಬೇಡಿ” ಎಂದು ಹೇಳುತ್ತಾ, ಇಂತಹ ಅರ್ಜಿಗಳ ಸಲ್ಲಿಕೆಯ ಬಗ್ಗೆ ನ್ಯಾಯಾಲಯವು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿತು.
ಇದನ್ನೂ ಓದಿ:ಗೋವಾಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: ಮೂವರು ಸಾ*ವು, 6 ಜನರಿಗೆ ಗಾಯ
ಅಷ್ಟೇ ಅಲ್ಲದೇ “ನ್ಯಾಯಾಧೀಶರು ಅಂತಹ ವಿಷಯಗಳಲ್ಲಿ ಪರಿಣತರಲ್ಲ, ಜವಬ್ದಾರಿಯಿಂದ ಈ ದೇಶಕ್ಕೆ ಕರ್ತವ್ಯ ನಿರ್ವಹಿಸಿ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠ ಹೇಳಿದೆ.