ಬೆಂಗಳೂರು : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಬಸ್ನಲ್ಲೇ ಚಾಲಕನೋರ್ವ ನಮಾಜ್ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿತ್ತು. ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯರ ಓಲೈಕೆಯ ಪರಿಣಾಮವಾಗಿ ಬಸ್ನಲ್ಲಿ ನಮಾಜ್ ಮಾಡಿದ್ದಾನೆ ಎಂದರು.
ಇದನ್ನೂ ಓದಿ:ಪಾಕ್ ಪರ ಘೋಷಣೆ ಕೂಗಿದವನ ಹತ್ಯೆ ಪ್ರಕರಣ: ಕರ್ತವ್ಯ ಲೋಪವೆಸಗಿದ ಮೂವರು ಪೊಲೀಸರು ಸಸ್ಪೆಂಡ್
ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಘಟನೆ ನಡೆದಿದ್ದು, ಬಸ್ ಚಾಲಕ ಬಸ್ ನಲ್ಲೇ ನಮಾಜ್ ಮಾಡುತ್ತಿರುವ ವಿಡಿಯೊವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಲಾತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಬಸ್ನಲ್ಲಿ ನಮಾಜ್ ಮಾಡಿದ ಚಾಲಕನ ವಿರುದ್ದ ತನಿಖೆಯೂ ಆರಂಭವಾಗಿದೆ. ಇದೀಗ ಈ ಘಟನೆ ಬಗ್ಗೆ ಆರ್.ಅಶೋಕ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಆರ್.ಅಶೋಕ್ ‘ಸಿದ್ದರಾಮಯ್ಯ ನಡೆ, ನುಡಿ ನೋಡಿದಾಗ ಹೇಗೆ ಮುಸ್ಲಿಮರ ಓಲೈಕೆ ಮಾಡ್ತಿದ್ದಾರೆ ತಿಳಿಯುತ್ತಿದೆ. ಇದರ ಪ್ರತಿಫಲವಾಗಿ ಬಸ್ಸಿನಲ್ಲಿ ನಮಾಜ್ ಮಾಡಿದ್ದಾನೆ. ಬಸ್ ಚಲಿಸುವಾಗಲೇ ನಮಾಜ್ ಮಾಡಿದ್ದರೆ, ಎಲ್ಲರಿಗೂ ಪುಣ್ಯ ಪ್ರಾಪ್ತಿ ಆಗೋಗ್ತಿತ್ತು. ಸಿದ್ದರಾಮಯ್ಯರ ಮಾತಿ ಕೇಳಿ ವಿಮಾನದಲ್ಲಿ ನಮಾಜ್ ಮಾಡಿದ್ರೆ ಗೋವಿಂದ. ಇನ್ನೂ ಈ ದಾರಿ ಎಲ್ಲಿಗೆ ಹೋಗಿ ಮುಟ್ಟತ್ತೊ ಗೊತ್ತಿಲ್ಲ.
ಇದನ್ನೂ ಓದಿ :ಜಾತಿ ಗಣತಿಗೆ ಆಗ್ರಹಿಸಿ ಮೋದಿಗೆ ಪತ್ರ ಬರೆದಿದ್ದೆ; ಕೇಂದ್ರ ಸರ್ಕಾರ ಒಳ್ಳೆ ಕೆಲಸ ಮಾಡಿದೆ: ಮಲ್ಲಿಕಾರ್ಜುನ್ ಖರ್ಗೆ
ಒಬ್ಬ ಮುಖ್ಯಮಂತ್ರಿಯಾಗಿ ಯಾವ ಹಂತದವರೆಗೂ ರಾಜಿನಾಮೇ ಮಾಡಬಹುದು. ಕೂಡಲೇ ನಮಾಜ್ ಮಾಡಿದವನನ್ನು ಕೆಲಸದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಅತಿರೇಕಕ್ಕೆ ಹೋಗುತ್ತವೆ. ಸರ್ಕಾರದ ಬಗ್ಗೆ ರಾಜ್ಯದ ಜನರು ಯೋಚನೆ ಮಾಡುವಂತಾಗಿದೆ. ಜನ ಸರ್ಕಾರದ ವಿರುದ್ದ ಹಿಡಿಶಾಪ ಹಾಕುತ್ತಿದೆ.