Friday, May 2, 2025

ಜಾತಿ ಗಣತಿಗೆ ಆಗ್ರಹಿಸಿ ಮೋದಿಗೆ ಪತ್ರ ಬರೆದಿದ್ದೆ; ಕೇಂದ್ರ ಸರ್ಕಾರ ಒಳ್ಳೆ ಕೆಲಸ ಮಾಡಿದೆ: ಮಲ್ಲಿಕಾರ್ಜುನ್​ ಖರ್ಗೆ

ಬೆಂಗಳೂರು : ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ನಡೆಸಲು ಸಿದ್ದತೆ ನಡೆಸಿದ್ದು. ನಿನ್ನೆ(ಏ.30) ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮಲ್ಲಿಕಾರ್ಜುನ್​ ಖರ್ಗೆ ಸ್ವಾಗತಿಸಿದ್ದು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಖರ್ಗೆ ‘ಈ ಕುರಿತು ಪ್ರಧಾನಿಗೆ ಪತ್ರ ಬರೆದು ಆಗ್ರಹಿಸಿದ್ದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್​ ಖರ್ಗೆ ‘ ಜಾತಿಗಣತಿ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದೆ. ಏಪ್ರೀಲ್ 16ರಂದು ಈ ಕುರಿತು ಪತ್ರ ಬರೆದಿದ್ದು. ಸಂಸತ್ತಿನಲ್ಲಿ ಜಾತಿಗಣತಿ  ಬಗ್ಗೆ ನಾವು ಧ್ವನಿ ಎತ್ತಿದ್ದೆವು, 2011ರಲ್ಲಿ ಯುಪಿಎ ಸರ್ಕಾರ ಜನಗಣತಿ ಮಾಡಿಸಿತ್ತು. ಈ ವೇಳೆ 25 ಕೋಟಿ ಕುಟುಂಬಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು.

ಇದನ್ನೂ ಓದಿ :ಗ್ಯಾಸ್​ ಸಿಲಿಂಡರ್​ ಲೀಕ್​: ಮನೆಯಲ್ಲಿ ಹಚ್ಚಿದ್ದ ದೀಪದಿಂದ ಇಬ್ಬರು ಸಜೀವ ದಹನ

2014ರಲ್ಲಿ ಬಿಜೆಪಿ ಸರ್ಕಾರ ಬಂದಿತು, ಈ ವೇಳೆ ನಾವು ನಡೆಸಿದ್ದ ಅಧ್ಯಯನ ವರದಿ ಬಿಡುಗಡೆಗೆ ಆಗ್ರಹಿಸಿದೆವು. ಆದರೆ ಹಲವು ಕಾರಣದಿಂದ ಜಾತಿ ಗಣತಿ ಡೆಟಾವನ್ನು ರಿಲೀಸ್​ ಮಾಡಲಿಲ್ಲ. ಇದರಿಂದ ಸಾಮಾಜಿಕ ನ್ಯಾಯ ಸಿಗ್ತಿಲ್ಲಾ. ಈಗಾಗೀ ಅರ್ಥಪೂರ್ಣ ವರದಿ ಅವಶ್ಯವಾಗಿದ್ದು. ಕೂಡಲೇ ಸಮಗ್ರ ಜಾತಿಗಣತಿ ನಡೆಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಮುಂದುವರಿದು ಮಾತನಾಡಿದ ಖರ್ಗೆ ‘ಜಾತಿಗಣತಿ ತೋರಿಕೆಗೆ ಆಗಬಾರದು, ಅದನ್ನು ಸರಿಯಾಗಿ ನಡೆಸಬೇಕೂ. ಸರ್ಕಾರದ ಈ ನಿರ್ಧಾರವನ್ನು ನಾನು, ರಾಹುಲ್​ ಗಾಂಧಿ ಇಬ್ಬರು ಸ್ವಾಗತಿಸಿದ್ದೇವೆ. ಈ ಸರ್ವೆಗೆ 550 ಕೋಟಿ ಹಣವನ್ನು ಮೀಸಲಾಗಿಟ್ಟಿದ್ದಾರೆ, ಆದರೆ ಇನ್ನು ಹೆಚ್ಚು ಹಣ ನೀಡಿ ಸಮಯ ನಿಗಧಿ ಮಾಡಬೇಕು. ರಾಜ್ಯ ಬಿಜೆಪಿಗರು ಜಾತಿಗಣತಿಗೆ ವಿರೋಧ ಮಾಡ್ತಾರೆ. ಆದರೆ ನಾವು ಒಳ್ಳೇ ಕೆಲಸ ಮಾಡಿದರೆ ಅದನ್ನು ಪ್ರಶಂಸಿಸುತ್ತೇವೆ. ಜಾತಿಗಣತಿ ವರದಿ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲ್ಲ. ಈ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

ಇದನ್ನೂ ಓದಿ :ವರದಕ್ಷಿಣೆ ಕಿರುಕುಳ: ಪತ್ನಿಗೆ ಅನ್ನ ನೀಡದೆ ಉಪವಾಸ ಸಾಯಿಸಿದ ಕ್ರೂರಿಗಳಿಗೆ ಜೀವಾವಧಿ ಶಿಕ್ಷೆ

ಇನ್ನು 2023ರಲ್ಲೇ ಜಾತಿಗಣತಿ ಮಾಡಬೇಕೂ ಎಂದು ಪ್ರಧಾನಿಗೆ ಹೇಳಿದ್ದೆ. ಆದರೆ ಕೇಂದ್ರ ಸರ್ಕಾರ ಅಂದು ಇದಕ್ಕೆ ಮಹತ್ವ ಕೊಡಲಿಲ್ಲ. ಆದರೆ ಈಗ ಇದಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾವು ಸ್ವಾಗತ ಮಾಡ್ತೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES