Thursday, May 1, 2025

ವರದಕ್ಷಿಣೆ ಕಿರುಕುಳ: ಪತ್ನಿಗೆ ಅನ್ನ ನೀಡದೆ ಉಪವಾಸ ಸಾಯಿಸಿದ ಕ್ರೂರಿಗಳಿಗೆ ಜೀವಾವಧಿ ಶಿಕ್ಷೆ

ಕೊಲ್ಲಂ: ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ಸೊಸೆಗೆ ಆಹಾರ ನೀಡದೇ ಉಪವಾಸ ಸಾಯುವಂತೆ ಮಾಡಿದ ಮಹಿಳೆಯ ಗಂಡ ಹಾಗೂ ಆತನ ತಾಯಿಗೆ ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ಜೀವಾವದಿ ಶಿಕ್ಷೆ ವಿಧಿಸಿದ್ದು. 1 ಲಕ್ಷ ದಂಡ ವಿಧಿಸಿದೆ.

ಏನಿದು ಪ್ರಕರಣ..!

ಕೇರಳದ ಚಂದುಲಾಲ್​ ಎಂಬಾತ 2013ರಲ್ಲಿ ಕರುಂಗಪಲ್ಲಿಯ ನಿವಾಸಿ ತುಷಾರ ಎಂಬಾಕೆಯನ್ನು ಮದುವೆಯಾಗಿದ್ದನು. ಮದುವೆಯಾದ ಮೂರು ವರ್ಷಗಳ ಒಳಗೆ 2 ಲಕ್ಷ ವರದಕ್ಷಿಣೆ ನೀಡಬೇಕೂ ಎಂದು ಪತ್ನಿಗೆ ಒತ್ತಾಯಿಸಿದ್ದನು. ಆದರೆ ಮಹಿಳೆ ತುಷಾರ ಇದಕ್ಕೆ ಒಪ್ಪದ ಕಾರಣ ಆಕೆಯ ಗಂಡ ಚಂದುಲಾಲ್​ ಮತ್ತು ಅತ್ತೆ ಗೀತಾ ಲಾಲಿ ಆಕೆಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದರು.

ಇದನ್ನೂ ಓದಿ :ರಾಜವರ್ಧನ್ ಹೊಸ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್

ಪತ್ನಿ ತುಷಾರಾಗೆ  ಗಂಡ ಮತ್ತು ಅತ್ತೆ  ಇಬ್ಬರು ಅನ್ನ ನೀಡದೆ ಉಪವಾಸ ಕೂಡಿಹಾಕಿದ್ದರು. ಉಪವಾಸವಿದ್ದ ತುಷಾರಾ ಕಳೆದ 2019ರಲ್ಲಿ ಸಾವನ್ನಪ್ಪಿದ್ದಳು. ಈಕೆಯ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಒಂದು ಕ್ಷಣ ದಿಗ್ಬ್ರಮೆಗೆ ಒಳಗಾಗಿದ್ದರು. ಮಹಿಳೆಗೆ ಆಹಾರ ನೀಡದೆ ತೀವ್ರ ಕಿರುಕುಳ ನೀಡಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಎರಡು ಮಕ್ಕಳ ತಾಯಿಯಾಗಿದ್ದ ತುಷಾರ ಸಾಯುವ ವೇಳೆಗೆ ಕೇವಲ 21ಕೆ,ಜಿ ತೂಕವಿದ್ದಳು.

ಅಕ್ಷರಶಃ ಅಸ್ಥಿ ಪಂಜರದ ಗೂಡಾಗಿದ್ದ ತುಷಾರ ಸಾಯುವ ವೇಳೆಗೆ ತೀವ್ರ ಅನಾರೋಗ್ಯ ಪೀಡಿತಳಾಗಿದ್ದಳು.  ಅದರಲ್ಲೂ ಮರಣೋತ್ತರ ವರದಿ ಆಕೆಯ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆಕೆಯ ಹೊಟ್ಟೆಯಲ್ಲಿ ಒಂದೇ ಒಂದು ಅನ್ನದ ಅಗುಳಿರಲಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಿಗೆ ಬಂದಿತ್ತು.

ಇದನ್ನೂ ಓದಿ:‘ಡಿಕೆ ಸುರೇಶ್​ ನನ್ನ ಗಂಡ’ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ

ಇದೀಗ ಈ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು. ತುಷಾರ ಪತಿ ಚಂಧುಲಾಲ್​ ಮತ್ತು ಅತ್ತೆ ಗೀತ ಲಾಲಿಗಳನ್ನು ಅಪರಾಧಿ ಎಂದು ಪರಿಗಣಿಸಿರುವ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ 1 ಲಕ್ಷ ದಂಡ ವಿಧಿಸಿದೆ. ಜೊತೆಗೆ ಈ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಭಾವಿಸಿದೆ.

RELATED ARTICLES

Related Articles

TRENDING ARTICLES