Thursday, May 1, 2025

‘ಡಿಕೆ ಸುರೇಶ್​ ನನ್ನ ಗಂಡ’ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ

ರಾಮನಗರ : ಮಾಜಿ ಸಂಸದ ಡಿಕೆ, ಸುರೇಶ್​ ಅವರ ಪತ್ನಿ ಎಂದು ಮಹಿಳೆಯೊಬ್ಬಳು ವಿಡಿಯೋ ಹರಿಬಿಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದ್ದು. ಮಹಿಳೆಯ ವಿರುದ್ದ ರಾಮನಗರ ಸೆನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರೀಲ್​ 8ರಂದು ಪವಿತ್ರ ಎಂಬ ಮಹಿಳೆಯೊಬ್ಬಳು ಫೇಸ್​ಬುಕ್​ ಮತ್ತು ಇನ್ಸ್ಟಗ್ರಾಂನಲ್ಲಿ ವಿಡಿಯೋ ಹರಿಬಿಟ್ಟಿದ್ದಳು. ಈ ವಿಡಿಯೋದಲ್ಲಿ ನಾನು ಡಿಕೆ ಸುರೇಶ್​ ಪತ್ನಿ ಎಂದು ಮಹಿಳೆ ಹೇಳಿಕೊಂಡಿದ್ದಳು. ಅಷ್ಟೇ ಅಲ್ಲದೇ ಡಿ,ಕೆ ಸುರೇಶ್ ಭಾವಚಿತ್ರದೊಂದಿಗೆ ಮಹಿಳೆ ತನ್ನ ಪೋಟೊವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು.

ಇದನ್ನೂ ಓದಿ :ಮಧ್ಯಪ್ರಿಯರಿಗೆ ಶಾಕ್​: ಬಿಯರ್ ಬೆಲೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ..!

ಈ ಕುರಿತು ಇದೀಗ ಡಿ,ಕೆ ಸುರೇಶ್ ಅವರ ಪರ ವಕೀಲ ಪ್ರದೀಪ್​ ಎಂಬುವವರು ರಾಮನಗರ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು. ಡಿ.ಕೆ.ಸುರೇಶ್ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ವಿರುದ್ದ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES