Thursday, May 1, 2025

ಮಧ್ಯಪ್ರಿಯರಿಗೆ ಶಾಕ್​: ಬಿಯರ್ ಬೆಲೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ..!

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್​ ನೀಡಲು ಮುಂದಾಗಿದ್ದು. ಬಿಯರ್​ ದರವನ್ನು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿ ಬಾಟೆಲ್​ ದರವನ್ನು 10 ರಿಂದ 20 ಹೆಚ್ಚಸಬಹುದೆಂದು ನಿರೀಕ್ಷಿಸಲಾಗಿದೆ.

ಬಿಯರ್ ಮೇಲಿನ ಅಬಕಾರಿ ಸುಂಕವನ್ನ 205% ಹೆಚ್ಚಿಸುವ ಬಗ್ಗೆ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿಗೆ ಬಿಯರ್​ ದರವನ್ನು ಹೆಚ್ಚಿಸಲಾಗುತ್ತಿದ್ದು. ಸರ್ಕಾರದ ನಿರ್ಧಾರಕ್ಕೆ ಮದ್ಯಪ್ರಿಯರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ :ಪಾಕ್‌ ವಶದಲ್ಲಿರೋ BSF ಯೋಧ: ಪತಿಗಾಗಿ ಫಿರೋಜ್‌ಪುರಕ್ಕೆ ಹೊರಟ ಗರ್ಭಿಣಿ ಪತ್ನಿ

ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿದ್ದು. ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 205ಕ್ಕೆ ಹೆಚ್ಚಿಸುವ ಬಗ್ಗೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರ ಅನ್ವಯ ಸರಾಸರಿ ಬಿಯರ್​ ಬೆಲೆ 10ರೂನಿಂದ 15 ರೂಪಾಯಿ ಹೆಚ್ಚಳವಾಗುತ್ತದೆ ನಿರೀಕ್ಷಿಸಲಾಗಿದೆ.

RELATED ARTICLES

Related Articles

TRENDING ARTICLES