Saturday, May 24, 2025

ಪಾಕಿಸ್ತಾನ್​ನಲ್ಲಿ ಬಾಂಬ್​ ಸ್ಪೋಟ: 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

ಪೇಶಾವರ: ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪ್ರಬಲ ಬಾಂಬ್ ಸ್ಪೋಟ ಸಂಭವಿಸಿದ್ದು. ಘಟನೆಯಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದು. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಕೃತ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನ್ ಜಿಲ್ಲೆಯ ಪ್ರಧಾನ ಕಚೇರಿಯಾದ ವನಾದಲ್ಲಿರುವ ಸ್ಥಳೀಯ ಶಾಂತಿ ಸಮಿತಿಯ ಕಚೇರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದು. 16 ಜನರು ಗಾಯಗೊಂಡಿದ್ದಾರೆ. ಯಾವುದೇ ಸಂಘಟನೆ ಇಲ್ಲಿಯವರೆಗೆ ಸ್ಪೋಟದ ಹೊಣೆಯನ್ನು ಹೊತ್ತಿಕೊಂಡಿಲ್ಲ. ಇದನ್ನೂ ಓದಿ:ರೈಲ್ವೇ ಇಲಾಖೆ ಪರೀಕ್ಷೆ, ಜನಿವಾರ, ಮಂಗಳಸೂತ್ರಕ್ಕಿಲ್ಲ ತಡೆ :ಸಚಿವ ಸೋಮಣ್ಣ ಸ್ಪಷ್ಟನೆ

ಸ್ಪೋಟದ ಭೀಕರತೆಗೆ ಶಾಂತಿ ಸಮತಿಯ ಕಛೇರಿಯ ಕಟ್ಟಡ ಕುಸಿದು ಬಿದ್ದಿದ್ದು. ಹಲವಾರು ಜನ ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ನಡೆಸಿದ್ದಾರೆ. ಆಸ್ಪತ್ರೆ ಆಡಳಿತದ ಪ್ರಕಾರ ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿದ್ದು. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ :‘ಒಂದೇ ಒಂದು ಸಭೆ ಮಾಡಲು ಬಿಡಲ್ಲ’; ಬಿಜೆಪಿ ವಿರುದ್ದ ಪ್ರತಿಜ್ಞೆ ಕೈಗೊಂಡ ಕಾಂಗ್ರೆಸ್​​

ನವೆಂಬರ್ 2022 ರಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಕದನ ವಿರಾಮ ಒಪ್ಪಂದ ಕಳೆದುಕೊಂಡ ನಂತರ, ಪಾಕಿಸ್ತಾನವು ಭಯೋತ್ಪಾದಕ ಘಟನೆಗಳಲ್ಲಿ, ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಭಯೋತ್ಪಾದನೆ ಹೆಚ್ಚಳವಾಗಿದೆ.

RELATED ARTICLES

Related Articles

TRENDING ARTICLES