Monday, April 28, 2025

ತಿಮ್ಮಾಪುರ್​ ಚಡ್ಡಿ ಬಿಚ್ಚಿ ಚೆಕ್​ ಮಾಡ್ಬೇಕು, ಸರ್ಕಾರದ ವಿರುದ್ದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು : ಹಿಂದೂಗಳೆಂದು ನೋಡಿ ಕೊಲೆ ಮಾಡಿಲ್ಲ ಎಂಬ ಆರ್​.ಬಿ ತಿಮ್ಮಾಪುರ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದು ‘ತಿಮ್ಮಾಪುರ್​ಗೆ ಚಡ್ಡಿ ಬಿಚ್ಚಿ ಚೆಕ್​ ಮಾಡ್ಬೇಕಿತ್ತು. ತಿಮ್ಮಾಪುರ ಅವರು ಸಾರ್ವಜನಿಕ ಜೀವನದಲ್ಲಿ ಇರಬೇಡಿ, ಮನೆಯಲ್ಲಿ ಇರಿ. ಇಲ್ಲ ಅಂದ್ರೆ ಇದೇ ಮಾತನ್ನ ಮಂಜುನಾಥ್​ ಹಾಗೂ ಭರತ್​ ಅವರ ಕುಟುಂಬದ ಮುಂದೆ ಹೋಗಿ ಹೇಳೋ ಧೈರ್ಯ ಇದೆಯಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರ ಯುದ್ದ ಬೇಡ ಎಂಬ ಹೇಳಿಕೆಯ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ ‘ಈ ಮಾತು ಹೇಳಿದ ಸಿದ್ದರಾಮಯ್ಯರನ್ನು ವಿಧಾನಸೌದಕ್ಕೆ ಕರೆದುಕೊಂಡು ಬಂದು ಅವರಿಗೆ ಕರ್ನಾಟಕ ರತ್ನ ನೀಡಬೇಕಾ, ಸೆಕ್ಯುಲರ್​ಗಳ ತಮ್ಮ ಮನೆ ಬಾಗಿಲಿಗೆ ಬರುವು ತನಕ ಅರ್ಥ ಆಗೋದಿಲ್ಲ. ಇನ್ನು ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ನೀಡಿರುವ ಪರಿಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ. ಈ ರಾಜ್ಯ ಸರ್ಕಾರಕ್ಕೆ ನಾಚಿಗೆ ಆಗಬೇಕೂ. ಹೊರರಾಜ್ಯಕ್ಕೆ 15 ಲಕ್ಷ ಕೊಡ್ತಾರೆ, ಆದರೆ ನಮ್ಮ ರಾಜ್ಯದವರಿಗೆ 10 ಲಕ್ಷ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :ಧರ್ಮ ಕೇಳಿ ಶೂಟ್​ ಮಾಡಿದ್ದನ್ನ ನಾನ್​ ನೋಡಿಲ್ಲ: ಪಲ್ಲವಿ ಬಿಗ್​ ಟ್ವಿಸ್ಟ್​

ಪಹಲ್ಗಾಮ್​ನಲ್ಲಿ ನಡೆದ ದಾಳಿಯ ಬಗ್ಗೆ ಮಾತನಾಡಿದ ತೇಜಸ್ವಿ ಸೂರ್ಯ ‘ಮೂರ್ನಾಲ್ಕು ದಿನಗಳ ಹಿಂದೆ ಹಿಂದೂ ಪುರುಷರನ್ನು ಐಡೆಂಟಿಟಿ ಮಾಡಿ, ಅವರ ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾರೆ. ಅವರು ಕೊಂದಿದ್ದು ಪ್ರವಾಸಿಗರಲ್ಲ, ಹಿಂದೂಗಳನ್ನ ಮಾತ್ರ. ಬೇಸರದ ಸಂಗತಿ ಎಂದರೆ ಅಸಾದುದ್ದೀನ್​ ಓವೈಸಿ ಕೂಡ ಇದನ್ನು ಒಪ್ಪಿದ್ದಾರೆ. ಆದರೆ ಕಾಂಗ್ರೆಸ್​ ಇದನ್ನು ಒಪ್ಪಲು ತಯಾರಿಲ್ಲ. ಇಂಥ ದರಿದ್ರ ಪರಿಸ್ಥಿತಿಗೆ ಇವರು ಇಳಿದಿದ್ದಾರೆ.

ರಾಜ್ಯ ಸರ್ಕಾರಕ್ಕಿಂತ ಹೆಚ್ಚು ಪರಿಹಾರ ನಾವು ಕೊಡುತ್ತೇವೆ..!

ಈ ಸರ್ಕಾರ‌ ಮೃತರ ಕುಟುಂಬಕ್ಕೆ 10 ಲಕ್ಷ ಹಣ‌ ಘೋಷಣೆ ಮಾಡಿದ್ದಾರೆ. ಕನಿಷ್ಠ ಮಾನವೀಯತೆ ಇದ್ದರೆ 1 ಕೋಟಿ ಕೊಡಬೇಕಿತ್ತು. ಪಕ್ಕದ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಈ ಸರ್ಕಾರ 15 ಲಕ್ಷ ಹಣ‌ ಕೊಟ್ಟಿದ್ದಾರೆ. ಅದಕ್ಕೆ ಸರಿ ಸಮಾನವಾಗಿ ಆದರೂ ಹಣ ಕೊಡಬೇಕಿತ್ತು ಆದರೆ ಕೊಟ್ಟಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ವತಿಯಿಂದ 20 ಲಕ್ಷ ರೂಪಾಯಿ ಹಣವನ್ನು ಒಗ್ಗೂಡಿಸಿದ್ದೇವೆ. ನಾಳೆ ಅಥವಾ ನಾಡಿದ್ದು ಭರತ್ ಭೂಷಣ್ ಮನೆಗೆ 10 ಲಕ್ಷದ 1 ರೂಪಾಯಿ ಹಾಗೂ ಮಧುಸೂದನ್ ರಾವ್ ಮನೆಗೆ 10 ಲಕ್ಷದ 1 ರೂಪಾಯಿ ಕೊಡುತ್ತೇವೆ.

ಇದನ್ನೂ ಓದಿ :ಕಾಶ್ಮೀರಕ್ಕೆ ಹೋಗಿ ಅಂದ್ರೆ, ಪ್ರಧಾನಿ ಬಿಹಾರಕ್ಕೆ ಹೋಗಿ ಭಾಷಣ ಮಾಡ್ತಾರೆ: ಸಂತೋಷ್​ ಲಾಡ್​

ರಾಜ್ಯ ಸರ್ಕಾರ ಕೊಟ್ಟಿರುವ ಹಣಕ್ಕಿಂತ ಒಂದು ರೂಪಾಯಿ ಹೆಚ್ಚು ಹಣವನ್ನು ನಮ್ಮ ಕ್ಷೇತ್ರದಿಂದಲೇ ನೀಡುತ್ತೇವೆ. ಹುತಾತ್ಮರಾದ ಮಂಜುನಾಥ ‌ಮಗನಿಗೆ ಆರ್​ವಿ ಇನ್ಸ್ಟಿಟ್ಯೂಟ್​ಲ್ಲಿ ಸೀಟ್ ಕೊಡ್ತಾ ಇದ್ದೇವೆ.
ಹಾಗೆ CBS ಶಿಕ್ಷಣವನ್ನು ಭರತ್ ಮಗುವಿಗೆ ಟ್ರಾನ್ಸೆಂಡ್ ಶಾಲೆಯಲ್ಲಿ ಫ್ರೀ ಆಗಿ ಕೊಡ್ತಾರೆ. 1ನೇ ತರಗತಿ ಇಂದ ಪಿಯುಸಿ ತ‌ನಕ ಫ್ರೀ ಶಿಕ್ಷಣ ಕೊಡ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

RELATED ARTICLES

Related Articles

TRENDING ARTICLES