ಶಿವಮೊಗ್ಗ : ಜಮ್ಮು & ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಭೀಕರ ಉಗ್ರ ದಾಳಿಯಲ್ಲಿ ಸಾವನ್ನಪ್ಪಿರುವ ಮಂಜುನಾಥ್ ಅವರ ಪತ್ನಿ ಪಲ್ಲವಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು. ‘ಧರ್ಮ ಕೇಳಿ ಕೊಂದಿದ್ದನ್ನ ನಾನು ನೋಡಿಲ್ಲ, ಆದರೆ ಹೋಟೆಲ್ನಲ್ಲಿ ಬೇರೆಯವರು ನನಗೆ ಇದನ್ನು ಹೇಳಿದರು’ ಎಂದು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿಯ ಮೃತಪಟ್ಟ ಸಂತ್ರಸ್ಥರ ಮನೆಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದು. ಶಿವಮೊಗ್ಗದ ಮಂಜುನಾತ್ ರಾವ್ ಅವರ ಮನೆಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು. ‘ಇಬ್ಬರು ಪೊಲೀಸರು ಬಂದು NIA ಅಧಿಕಾರಿಗಳು ಬರಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಎಷ್ಟೊತ್ತಿಗೆ ಬರುತ್ತಾರೆ ಅಂತ ಗೊತಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಕಾಶ್ಮೀರಕ್ಕೆ ಹೋಗಿ ಅಂದ್ರೆ, ಪ್ರಧಾನಿ ಬಿಹಾರಕ್ಕೆ ಹೋಗಿ ಭಾಷಣ ಮಾಡ್ತಾರೆ: ಸಂತೋಷ್ ಲಾಡ್
ಧರ್ಮ ಕೇಳಿ ಕೊಂದಿದ್ದನ್ನ ನಾನು ನೋಡಿಲ್ಲ..!
ಹಲ್ಗಾಮ್ನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ಪಲ್ಲವಿ ‘ನಾವು ಅಂದು ಪೆಹಲ್ಗಾಮಗೆ ಮಧ್ಯಾಹ್ನ 12 ವರೆಗೆ ತಲುಪಿದೆವು. ನಾವು ಅಲ್ಲಿ ಕುದುರೆ ಇಳಿದ ಕೂಡಲೇ ಫೈರಿಂಗ್ ನಡೆಯಿತು. ಸುಮಾರು 2 ಗಂಟೆ ಸಮಯದಲ್ಲಿ ಫೈರಿಂಗ್ ನಡೆಯಿತು. ಅಲ್ಲಿದ್ದ ಲೆಫ್ಟಿನೆಂಟ್ ಮತ್ತು ನನ್ನ ಪತಿ ಕುತ್ತಿಗೆಗೆ ಗುಂಡು ಬಿದ್ದಿತ್ತು. ಧರ್ಮ ಕೇಳಿ ಹಿಂದೂ, ಮುಸ್ಲಿಂ ಅಂತ ಬೇರ್ಪಡಿಸಿ ಶೂಟ್ ಮಾಡಿದ್ದು ಹೌದು, ಆದರೆ ಅದನ್ನು ನಾನು ನೋಡಿಲ್ಲ. ಅದನ್ನು ನನಗೆ ಹೋಟೆಲ್ನಲ್ಲಿ ಬೇರೆಯವರು ಹೇಳಿದರು. ನನ್ನ ಪತಿಯನ್ನು ದೂರದಿಂದಲೇ ಫೈರ್ ಮಾಡಿ ಕೊಂದರು ಎಂದು ಪಲ್ಲವಿ ಹೇಳಿದರು.
ಮುಂದುವರಿದು ಮಾತನಾಡಿದ ಪಲ್ಲವಿ ‘ನನ್ನ ಪತಿಗೆ ಶೂಟ್ ಮಾಡಿದ ನಂತರ ಉಗ್ರಗಾಮಿಗಳಿಗೆ ನಾನು ಕೂಗಿದೆ. ‘ಹಮೇ ಭಿ ಮಾರ್ ದೋ’ ಎಂದು ಹೇಳಿದೆ. ಆಗ ನನ್ನ ಮಗ ಅವರ ಬಳಿ ಕುತ್ತೆ ಹಮೇ ಮಾರೋ ಎಂದು ಹೇಳಿದ್ದು ನಿಜ. ಇದನ್ನು ನಿಜ ಎಂದು ಸಾಬೀತು ಪಡಿಸಲು ನಾನು ವಿಡಿಯೋ ಮಾಡಬೇಕಿತ್ತು ಅಷ್ಟೇ. ಈಗಾಗಲೇ ಹಲವಾರು ನೆಗೆಟಿವ್ ಕಾಮೆಂಟ್ಸ್ ಗಳು ವಿನಾಕಾರಣ ಬಂದಿವೆ ಎಂದು ಮಂಜುನಾಥ್ ಅವರ ಪತ್ನಿ ಮಾಧ್ಯಮದ ಮುಂದೆ ಬೇಸರ ತೋಡಿಕೊಂಡರು.