ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ 121ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಬಾಗಲಕೋಟೆಯ ರೈತನೊಬ್ಬನನ್ನ ಹೊಗಳಿ ಗುಣಗಾನ ಮಾಡಿದ್ದು. ಬಯಲು ಸೀಮೆಯಲ್ಲಿ ಸೇಬು ಬೆಳೆದ ರೈತ ಶ್ರೀ ಶೇಲ್ ತೇಲಿ ಪ್ರಧಾನಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 121ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಬಯಲು ಸೀಮೆಯಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ್ ತೇಲಿ ಅವರನ್ನು ಗುಣಗಾನ ಮಾಡಿದ್ದಾರೆ. ಶ್ರೀಶೈಲ್ ತೇಲಿ ಅವರು ತಮ್ಮ ಏಳು ಎಕರೆಯಲ್ಲಿ ಬೆಳೆದ ಸೇಬು ಬೆಳೆ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಎಂತಹ ಕಠಿಣ ಸಮಯ ಬಂದರೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ: ಸಿಎಂ ಸಿದ್ದರಾಮಯ್ಯ
ರೈತ ಶ್ರೀಶೈಲ್ ತೇಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದವರು. ಬಯಲು ಸೀಮೆಯಲ್ಲಿ ಸೇಬು ಬೆಳೆದು ಸಾಧನೆ ಮಾಡಿದ್ದಾರೆ. 2 ವರ್ಷದ ಹಿಂದೆ ಸೇಬು ನಾಟಿ ಮಾಡಿದ್ದ ಭರ್ಜರಿ ಇಳುವರಿ ಪಡೆದಿದ್ದರು. ಸಾಮಾನ್ಯವಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುವ ಸೇಬನ್ನು 35 ಡಿಗ್ರಿ ಉಷ್ಣಾಂಶವಿರುವ ಬಯಲು ಪ್ರದೇಶದಲ್ಲಿ ಬೆಳೆದು ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಇದೀಗ ಪ್ರಧಾನಿ ಮೋದಿಯವರಿಂದಲೂ ಮೆಚ್ಚುಗೆ ಪಡೆದಿದ್ದಾರೆ.
ಇನ್ನು ಪ್ರಧಾನಿ ಮೋದಿ ಮೆಚ್ಚುಗೆ ಬಗ್ಗೆ ಶ್ರೀ ಶೈಲ್ ತೇಲಿ ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡಿದ್ದು.
‘ನಮೋ ಮನ್ ಕೀ ಬಾತ್ ನಲ್ಲಿ ಆ್ಯಪಲ್ ಬೆಳೆ ಬಗ್ಗೆ ಮಾತನಾಡಿದ್ದು ಖುಷಿ ಹೆಚ್ಚಿಸಿದೆ. ಮೋದಿ ಗುಣಗಾನದ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ. ಅವರ ಮಾತುಗಳು ನನಗೆ ಪ್ರೇರಣೆಯಾಗಿವೆ. ಆ್ಯಪಲ್ ಬೆಳೆಯಲು ಸಾಕಷ್ಟು ಶ್ರಮ ಪಟ್ಟಿದೆ, ಇದೀಗ ನಮೋ ಗುಣಗಾನದಿಂದ ಮನಸು ಹಗುರವಾಗಿದೆ.
ಇದನ್ನೂಓದಿ:ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಸುಂದರಿಗೆ 25 ಲಕ್ಷ ರೂಪಾಯಿ ಕೊಟ್ಟು ಮೋಸ ಹೋದ ಭೂಪ
ದೆಹಲಿಯಲ್ಲಿರುವ ಪ್ರಧಾನಿ ಮೋದಿ ಕುಳಲಿಯಲ್ಲಿರುವ ನನ್ನ ಹೆಸರು ಬಳಸಿ ವರ್ಣನೆ ಮಾಡಿರುವುದು ಖುಷಿ ಹೆಚ್ಚಿಸಿದೆ. ದೇಶದ ಮಟ್ಟದಲ್ಲಿ ಕುಳಲಿ ಗ್ರಾಮದ ಹೆಸರು ಹರಡಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.