ಕಲಬುರಗಿ : ಪಾಕಿಸ್ತಾನ ವಿರುದ್ದ ಯುದ್ದದ ಅನಿವಾರ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದು. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಏನಾದರೂ ಇದೆಯಾ, ಸಾಬ್ರು ಎಂಜಲು ತಿನ್ನೋ ಪಾರ್ಟಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ಸಿಎಂ ಸಿದ್ದರಾಮಯ್ಯಗೆ ಮಾನ ಮಾರ್ಯಾದೆ ಏನಾದರೂ ಇದೆಯಾ? ಸಿದ್ದರಾಮಯ್ಯ ಹಿಂದೂಗಳು ವೋಟ್ ಹಾಕಿಲ್ವ? ಕೇವಲ ಸಾಬುರುಗಳೇ ವೋಟ್ ಹಾಕಿದಾರ? ಸಾಬುರ ಎಂಜಲು ತಿನ್ನೊ ಪಾರ್ಟಿ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಸಾಬ್ರು ಪಾರ್ಟಿ ಆಗಿಬಿಟ್ಟಿದೆ. ಕಾಂಗ್ರೆಸ್ ಅಯೋಗ್ಯರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಇದನ್ನೂ ಓದಿ :ಭಯೋತ್ಪಾದನೆಗೆ ಧರ್ಮವಿಲ್ಲ, ಪುರಾವೆ ಇಲ್ಲದೇ ಭಾರತ ನಮ್ಮನ್ನೂ ದೂಷಿಸುತ್ತಿದೆ: ಶಾಹಿದ್ ಆಫ್ರೀದಿ
ಯುದ್ಧ ಬೇಕು, ಬೇಡ ಅನ್ನೊದು ಸಿದ್ದರಾಮಯ್ಯಗೆ ಸಂಬಂಧವಿಲ್ಲ, ಸಿದ್ದರಾಮಯ್ಯ ಕರ್ನಾಟಕದ ಸಿಎಂ ಅಷ್ಟೇ. ಯುದ್ಧದ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ ಹಾಗೂ ಸೇನೆ, ರಾಜ್ಯದಲ್ಲಿ ಹಿಂದೂಗಳ ಮೇಲೆ ದಲಿತರ ಮೇಲಿನ ಅತ್ಯಾಚಾರ ದೌರ್ಜನ್ಯ ತಡೆಗಟ್ಟಲಿ. ಮಹಾನ್ ದಲಿತ ನಾಯಕ ಪ್ರಿಯಾಂಕ್ ಖರ್ಗೆ ಎಲ್ಲಿದಾನೆ? ಧರ್ಮ ಕೇಳಿ ಹೊಡೆದಿಲ್ಲ ಅಂತಾ ಪ್ರಿಯಾಂಕ್ ಖರ್ಗೆ ಹೇಳ್ತಾನೆ. ಅವನಿಗೆ ಪ್ರಬುದ್ದತೆ ಅನ್ನೋಂದು ಇಲ್ವಾ. ಬರಿ ಮುಸ್ಲಿರ ಹಿಂದೆ ಹೋಗ್ತಿದ್ದಾರೆ. ನಾವು ಹಿಂದೂಗಳು, ಸನಾತನಿಗಳು ಒಂದಾಗಬೇಕೂ ಎಂದು ಹೇಳಿದರು.
ಇದನ್ನೂ ಓದಿ :ಪ್ರತಿಯೊಬ್ಬನ ರಕ್ತ ಕುದಿಯುತ್ತಿದೆ, ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ: ಮೋದಿ
ಮುಂದುವರಿದು ಮಾತನಾಡಿದ ಯತ್ನಾಳ್ ‘ನಮ್ಮ ದೇಶದ ಸುರಕ್ಷಿತವಾಗಿ ನರೇಂದ್ರ ಮೋದಿಯವರ ಕೈಯಲ್ಲಿದೆ, ಅವರು ಶೀಘ್ರವೇ ಪಾಕಿಸ್ತಾನಕ್ಕೆ ಪಾಠ ಕಲಿಸ್ತಾರೆ. ಓವೈಸಿಕ್ಕಿಂತ ಖತರನಾಕ್ ನಮ್ಮ ಕೆಲ ಹಿಂದೂಗಳಿದಾರೆ. ಒವೈಸಿಗೆ ಹುಟ್ಟಿದ ಕೆಲ ಹಿಂದೂಗಳು ನಮ್ಮಲ್ಲಿದಾರೆ. ನಮ್ಮಲ್ಲಿರೋ ಕೆಲ ತಾಯಿಗಂಡರು ಪಾಕ್‌ಗೆ ಸಪೋರ್ಟ್ ಮಾಡೋರಿದಾರೆ. ಕಲಬುರಗಿಯಲ್ಲಿ ಪಾಕಿಸ್ತಾನ ಧ್ವಜ ಹೆಣ್ಮಕ್ಕಳು ತೆಗಿತ್ತಾರೆ. ಪಾಕಿಸ್ತಾನದ ಧ್ವಜ ಆ ಹೆಂಗಸಿಗೆ ಏನ್ ಸಂಬಂಧ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.