Thursday, January 16, 2025

ಅಂಬ್ಯುಲೆನ್ಸ್ ಗಾಗಿ ರಾತ್ರಿಎಲ್ಲಾ ಕಾದುಕುಳಿತ ಕೊರೊನಾ ಸೋಂಕಿತ..!

ಹುಬ್ಬಳ್ಳಿ  : ಕೊರೊನಾ ಸೋಂಕಿತನೊಬ್ಬ ರಾತ್ರಿಯಿಂದಲೇ ಅಂಬ್ಯುಲೆನ್ಸ್ ಗಾಗಿ ಕಾದು‌ ಕುಳಿತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.‌ ಕಳೆದ ರಾತ್ರಿ 11 ಗಂಟೆಯಿಂದ ಅಂಬ್ಯುಲೆನ್ಸ್ ಗಾಗಿ ಕಾಯುತ್ತಿದ್ದರು  ಅಂಬುಲೈನ್ ಬಂದಿರಲಿಲ್ಲ.

ಅಂಬುಲೈನ್ ಬಾರದ ಪರಿಣಾಮ ಚೆನ್ನಮ್ಮ ಸರ್ಕಲ್ ಬಳಿಯೇ ಸೋಂಕಿತ ಓಡಾಡುತ್ತಿದ್ದ. ಹಳೇ ಬಸ್ ನಿಲ್ದಾಣ ಬಳಿಯ ಲಾಡ್ಜ್ ನಲ್ಲಿ ಕಳೆದ ಕೇಲವು ದಿನಗಳಿಂದ ಸೋಂಕಿತ ವಾಸವಾಗಿದ್ದು,

ಹುಬ್ಬಳ್ಳಿಯಲ್ಲಿ ರೈಲ್ವೆ ಗುತ್ತಿಗೆದಾರನಾಗಿ ಈತ ಕೆಲಸ ಮಾಡಿತ್ತಿದ್ದಾನೆ. ಉತ್ತರ ಪ್ರದೇಶ ಮೂಲದ ಈ ವ್ಯಕ್ತಿಗೆ ಪಾಸಿಟಿವ್ ಬಂದಿದ್ರು ಆತನಿಗೆ ಚಿಕಿತ್ಸೆ ಸಿಕ್ಕಿರಲಿಲ್ಲ. ಅಂಬ್ಯುಲೆನ್ಸ್ ಬಗ್ಗೆ  ಪೊಲೀಸರ ಬಳಿ ಬಂದು ಸಹಾಯ ಕೇಳಿದಾಗ, ಪೊಲೀಸರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನ ಕಳುಹಿಸಿ ಆಂಬ್ಯುಲೇನ್ಸ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾರೆ.

RELATED ARTICLES

Related Articles

TRENDING ARTICLES