ಬೆಂಗಳೂರು : ಪಾಕಿಸ್ತಾನದೊಂದಿಗೆ ಯುದ್ದದ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತಿಗೆ ತೀವ್ರ ಆಕ್ರೋಶ ಕೇಳಿಬರುತ್ತಿದ್ದು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ‘ತಕ್ಷಣಕ್ಕೆ ಯುದ್ದ ಬೇಡ ಅಂತ ಹೇಳಿದ್ದೀನಿ. ಆದರೆ ಯುದ್ದ ಅನಿವಾರ್ಯ ಆದ್ರೆ ಮಾಡಬೇಕೂ ಎಂದು ಹೇಳಿದ್ದಾರೆ.
ನಿನ್ನೆ (ಏ.26) ಮೈಸೂರಿನಲ್ಲಿ ಭಾರತ ಮತ್ತು ಪಾಕ್ ನಡುವಿನ ಘರ್ಷಣೆಯ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ‘ಪಾಕಿಸ್ತಾನದೊಂದಿಗೆ ಯುದ್ದದ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಭದ್ರತೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಹೇಳಿದ್ದರು. ಇದನ್ನು ಪಾಕಿಸ್ತಾನದ ಮಾಧ್ಯಮಗಳು ಭಿತ್ತರ ಮಾಡಿದ್ದವು. ಈ ಕುರಿತು ಸಿದ್ದರಾಮಯ್ಯರ ಮೇಲೆ ವಿಪಕ್ಷಗಳು ಮುಗಿಬಿದ್ದಿದ್ದವು. ಇದರ ಬೆನ್ನಲ್ಲೆ ಸಿಎಂ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ :ಪರಮಾಣು ಬಾಂಬ್ ಪ್ರದರ್ಶನಕ್ಕಿಲ್ಲ; ಅಣುಬಾಂಬ್ ಬೆದರಿಕೆ ಹಾಕಿದ ಪಾಕ್ ಸಚಿವ
ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಪಾಕಿಸ್ತಾನದೊಂದಿಗೆ ಯುದ್ದ ಅನಿವಾರ್ಯವಿದ್ದರೆ ಮಾಡಬೇಕೂ. ನಾನು ಯುದ್ದ ಬೇಡವೇ, ಬೇಡ ಎಂದು ಹೇಳಿಲ್ಲ. ಆದರೆ ಯುದ್ದ ಪರಿಹಾರ ಅಲ್ಲ ಭದ್ರತೆ ಕೊಡುವ ಜವಬ್ದಾರಿ ಇದೆ. ಅದರಲ್ಲಿ ವೈಪಲ್ಯವಾಗಿದೆ ಅಂತ ಹೇಳಿದ್ದೀನಿ. ಪುಲ್ವಾಮದಲ್ಲಿ 40 ಜನ ಸತ್ತಿದ್ದಾರೆ. ಈಗ 27 ಜನ ಸತ್ತಿದ್ದಾರೆ. ಯುದ್ದ ಅನಿವಾರ್ಯವಾದರೆ ಮಾಡಬೇಕೂ, ಆದರೆ ತಕ್ಷಣ ಯುದ್ದ ಬೇಡ ಅಂತ ಹೇಳಿದ್ದೀನಿ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.