ಬೆಂಗಳೂರು : ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಹಲ್ಗಾಂನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು. ಪಹಲ್ಗಾಂನಲ್ಲಿ ಜಾತಿ, ಧರ್ಮ ಕೇಳಿ ಕೊಲ್ಲಲಾಗಿದೆ. ಈ ರೀತಿ ಎಲ್ಲೂ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ‘ಪೆಹಲ್ಗಾಂನಲ್ಲಿ ಜಾತಿ, ಧರ್ಮ ಕೇಳಿ ಬಲಿ ಹಾಕಿದ್ದಾರೆ. ಆ ರೀತಿ ನಡೆಯಬಾರದು. ಕರ್ನಾಟಕದಲ್ಲೂ ಕೂಡ ಕೆಲವರು ಜಾತಿ, ಧರ್ಮವನ್ನೂ ಆಧಾರಿಸಿ ಮಾತನಾಡುತ್ತಾರೆ. ಆದರೆ ಈ ರೀತಿ ನಡೆಯಬಾರದು. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡಬಾರದು. ನೀವು ವಿದ್ಯಾರ್ಥಿಗಳು ಕೂಡ ಜಾತಿ, ಧರ್ಮದ ಬಗ್ಗೆ ಮಾತನಾಡಬಾರದೂ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ :ಮೊಬೈಲ್ ಕಸಿದುಕೊಂಡ ಶಿಕ್ಷಕಿಗೆ ಜಡೆ ಹಿಡಿದು, ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ
ಅಂಬೇಡ್ಕರ್ ವಿರುದ್ದ ಮಾತನಾಡುತ್ತಿದ್ದಾರೆ..!
ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟಿಸಿದ ಮಲ್ಲಿಕಾರ್ಜುನ್ ಖರ್ಗೆ ‘ಬಾಬಾ ಸಾಹೇಬ್ ಅಂಬೇಡ್ಕರ್ ಮಾಡಿರುವ ಕೆಲಸವನ್ನು ಇನ್ನೂ ಕೆಲ ಜನ ಮೆಚ್ಚಿಕೊಳ್ಳುತ್ತಿಲ್ಲ, ಏನು ಅಂಬೇಡ್ಕರ್ ಒಬ್ಬರೇನಾ ಸಂವಿಧಾನ ಮಾಡಿರೋದು ಅನ್ನೋ ದಾಟಿಯಲ್ಲಿ ಮಾತನಾಡಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ನಮ್ಮ ಜನರು ಇದ್ದಾರೆ ಎಂದು ಹೇಳುತ್ತಾರೆ. ಆದರೆ ಸಂವಿಧಾನದ ಜಾರಿಯಾಗುವ ತನಕ ಪ್ರತಿಯೊಂದು ಹಂತದಲ್ಲೂ ಅಂಬೇಡ್ಕರ್ ರವರ ಕೊಡುಗೆ ಅಪಾರವಾಗಿತ್ತು.
ಅಂಬೇಡ್ಕರ್ ಪ್ರತಿಯೊಂದು ಆರ್ಟಿಕಲ್ ರಚಿಸುವಾಗಲೂ, ಮಂಡಿಸುವಾಗಲೂ ಗಾಢವಾದ ಅಧ್ಯಯನ ನಡೆಸಿದರು. ಆದರೆ ಅದನ್ನ ಕೆಲವೊಂದು ವ್ಯಕ್ತಿಗಳು ಇಂದಿಗೂ ಒಪ್ಪಲು ಸಿದ್ದರಿಲ್ಲ. ಕರ್ನಾಟಕದ ಜನರಿಗೆ ಏನಾಗಿದೆ? ಪ್ರತಿಯೊಂದು ವಿಚಾರದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಟೀಕೆ ಮಾಡುತ್ತಿದ್ದೀರಾ?
ಅವರು ಸಂವಿಧಾನ ಕೊಡದಿದ್ದರೆ ನಿಮಗೆ ಯಾವುದೇ ಹಕ್ಕುಗಳೇ ಇರುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಟೀಕೆ ಮಾಡಬೇಡಿ.
ಇದನ್ನೂ ಓದಿ :ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜವನ್ನು ತೆರವುಗೊಳಿಸಿದ ಭಾರತ
ದಲಿತರು ನಾನಾ ಕಾರಣಗಳಿಂದ ಹಿಂದೆ ಉಳಿದಿರಬಹುದು, ಮಾತನಾಡದೇ ಇರಬಹುದು. ಒಮ್ಮೆ ಅವರು ತಿರುಗಿ ಬಿದ್ದರೆ ಯಾರೂ ಕೂಡ ತಡೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವ ವ್ಯಕ್ತಿಗಳು ಇದನ್ನ ಗಮನಿಸಬೇಕು. ಇನ್ನು ಮುಂದೆ ಯಾರೂ ಕೂಡ ಇಂತಹ ಮಾತುಗಳನ್ನು ಸಹಿಸಬೇಡಿ ಎಂದು ಹೇಳಿದರು.