ದೆಹಲಿ : ಅಪ್ರಾಪ್ತ ಮಗಳ ಎದುರೆ ತಾಯಿಯ ಮೇಲೆ ಅತ್ಯಾಚಾರ ಎಸಗಿರುವ ಹೀನ ಕೃತ್ಯ ದೆಹಲಿಯ ಸ್ವರೂಪ ನಗರದಲ್ಲಿ ನಡೆದಿದ್ದು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಫಾರ್ಮ್ಹೌಸ್ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ಸ್ವರೂಪ್ ನಗರದಲ್ಲಿ ನಡೆದಿದೆ. ಫಾರ್ಮಹೌಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಮೇಲೆ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ 35 ವರ್ಷದ ಧರ್ಮಿಂದರ್ ಎಂದು ಗುರುತಿಸಿದ್ದು. ಆರೋಪಿ ಬಿಹಾರ್ ಮೂಲದವನೆಂದು ಗುರುತಿಸಲಾಗಿದೆ. ಇದನ್ನೂ ಓದಿ :ಕಳೆದ 3 ದಶಕಗಳಿಂದ ಕೊಳಕು ಕೆಲಸ ಮಾಡಿದ್ದೇವೆ: ಭಯೋತ್ಪಾದನೆಯನ್ನು ಒಪ್ಪಿಕೊಂಡ ಪಾಕ್
ಘಟನೆ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು. ದೂರಿನಲ್ಲಿ ‘ಏಪ್ರಿಲ್ 20 ಮತ್ತು 21 ರ ಮಧ್ಯರಾತ್ರಿ 2 ರಿಂದ 2.30 ರ ಸುಮಾರಿಗೆ ಕಾದಿಪುರದ ತೋಟದ ಮನೆಯ ವರಾಂಡಾದಲ್ಲಿ ತಾನು ಮತ್ತು ತನ್ನ 11 ವರ್ಷದ ಮಗಳು ಮಲಗಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಅದೇ ಪ್ರದೇಶದಲ್ಲಿ ವಾಸಿಸುತಿದ್ದ ಆರೋಪಿ ಧರ್ಮಿಂದರ್, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಮಲಗಿದ್ದ ನಮ್ಮ ಕೈ ಕಾಲುಗಳನ್ನು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ.
ಇದನ್ನೂ ಓದಿ :ಭಾರತ ದಾಳಿ ನಡೆಸಿದರೆ ಸಂಪೂರ್ಣ ಯುದ್ದ ನಡೆಯುತ್ತಿದೆ: ಪಾಕ್ ರಕ್ಷಣಾ ಸಚಿವ
ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಫಾರ್ಮ್ಹೌಸ್ನ ಗೋಡೆ ಹಾರಿ ಪರಾರಿಯಾಗಿದ್ದಾನೆ. ಏಪ್ರೀಲ್ 24ರಂದು ಮಹಿಳೆಯ ಪತಿ ಮನೆಗೆ ಬಂದಾಗ ಘಟನೆ ಬಗ್ಗೆ ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು. ಆರೋಪಿಯ ವಿರುದ್ ಅತ್ಯಾಚಾರ ಮತ್ತು ಅತಿಕ್ರಮಣ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.