Thursday, January 16, 2025

ಪ್ರಧಾನಿ ನರೇಂದ್ರ ಮೋದಿ ಹೇಳಿದ್ಮೇಲೆ ರಾಮಮಂದಿರ ತೀರ್ಪು ಬಂದಿದ್ದು : ಸಂಸದ ಮುನಿಸ್ವಾಮಿ ವಿವಾದಾತ್ಮಕ ಹೇಳಿಕೆ

ಕೋಲಾರ : ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಸುಪ್ರೀಂಕೋರ್ಟ್ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಅಯೋಧ್ಯೆಯ ರಾಮಮಂದಿರ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವ್ರು ಸುಪ್ರೀಂಕೋರ್ಟ್ಗೆ ಸೂಚನೆ ಕೊಟ್ಟ ನಂತ್ರ ತೀರ್ಪು ಬಂದಿದೆ ಅಂತ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದ್ರು.
ರಾಮಮಂದಿರ ವಿವಾದವು ಹಲವು ವರ್ಷಗಳಿಂದಲೂ ಕೋರ್ಟ್ನಲ್ಲಿತ್ತು. ಈ ವಿಚಾರವಾಗಿ ಯಾವುದೇ ಪ್ರಧಾನಿಗಳು ಅಧಿಕಾರಕ್ಕೆ ಬಂದ್ರೂ ದೇಶದ ಭದ್ರತೆಯ ಬಗ್ಗೆ ಕೋರ್ಟ್ಗೆ ಭರವಸೆಯನ್ನು ಕೊಟ್ಟಿರಲಿಲ್ಲ. ಆದ್ರೆ, ಪ್ರಧಾನಿ ಮೋದಿ ಅವ್ರು ಅಧಿಕಾರಕ್ಕೆ ಬಂದ ನಂತ್ರ ದೇಶದ ಜನರ ಸುರಕ್ಷತೆಯ ಬಗ್ಗೆ ಸುಪ್ರಿಂಕೋರ್ಟ್ಗೆ ಹೇಳಿದ ಮೇಲೆ ರಾಮಮಂದಿರದ ಬಗ್ಗೆ ತೀರ್ಪು ಹೊರಬಿತ್ತು. ಕೋರ್ಟ್ ತೀರ್ಪು ಕೊಟ್ಟ ನಂತ್ರ ಎಲ್ಲಿಯೂ ಸಣ್ಣ ಗಲಾಟೆಯೂ ನಡೆದಿಲ್ಲ. ಹಾಗೇಯೇ, ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮತ್ತು ಪೌರತ್ವ ಕಾಯ್ದೆಯ ಬಗ್ಗೆಯೂ ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆಯನ್ನು ಇರಿಸಿದೆ ಅಂತ ಸಂಸದ ಎಸ್.ಮುನಿಸ್ವಾಮಿ ವಿವರಿಸಿದ್ರು.
.

RELATED ARTICLES

Related Articles

TRENDING ARTICLES