ದೆಹಲಿ : ಬಿಎಸ್ಎಫ್ ಯೋಧನನ್ನು ಪಾಕ್ ಸೇನೆ ವಶಕ್ಕೆ ಪಡೆದಿದ್ದು. ಪಿಕೆ ಸಿಂಗ್ ಎಂಬ ಯೋಧನನ್ನು ಪಾಕಿ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಎರಡು ದೇಶದ ಸೇನೆ ಚರ್ಚೆ ನಡೆಸುತ್ತಿದ್ದು. ವಶಕ್ಕೆ ಪಡೆದುಕೊಂಡಿರುವ ಯೋಧನನ್ನು ಬಿಡುಗಡೆಗೊಳಿಸಲು ಆಗ್ರಹಿಸಿದೆ.
ಫಿರೋಜ್ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ಕೆ ಸಿಂಗ್ ಎಂಬ ಯೋಧನನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದ್ದು, ಬಿ.ಕೆ ಸಿಂಗ್ ಬಿಎಸ್ಎಫ್ ಯೋಧರಾಗಿ ಕಾರ್ಯನಿರ್ವಸುತ್ತಿದ್ದರು. ಆಕಸ್ಮಿಕವಾಗು ಗಡಿ ದಾಟಿದ್ದ ಭಾರತೀಯ ಯೋಧನನ್ನು ಪಾಕ್ ಸೇನೆ ಪಂಜಾಬ್ನ ಜಾಲೋಕೆ ಡೌನಾ ಪ್ರದೇಶದಲ್ಲಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ :ಅಮಿತ್ ಷಾ ಘಟನೆ ನಡೆದ ಸ್ಥಳಕ್ಕೆ ಹೋದರೆ ಸತ್ತವರು ಬದುಕಿ ಬರಲ್ಲ: HC ಬಾಲಕೃಷ್ಣ
ಘಟನೆ ಸಂಬಂಧ ಪಾಕ್ ಸೇನೆ ಭಾರತೀಯ ಸೇನೆಗೆ ಮಾಹಿತಿ ನೀಡಿದ್ದು. ಭಾರತೀಯ ಸೇನೆ ಯೋಧನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಘಟನೆ ಸಂಬಂಧ ಎರಡು ದೇಶದ ಮಿಲಿಟರಿ ಪಡೆಗಳು ಉನ್ನತ ಪಟ್ಟದ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.