Friday, April 25, 2025

ರಾಷ್ಟ್ರಪತಿ ಭೇಟಿ ಮಾಡಿದ ಅಮಿತ್​ ಷಾ, ಜೈ ಶಂಕರ್​: ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥ, ಮಿತ್ರ ರಾಷ್ಟ್ರಗಳಿಗೆ ಮಾಹಿತಿ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಂಗಳವಾರ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಿವರಿಸಿದರು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಜರ್ಮನಿ, ಜಪಾನ್, ಪೋಲೆಂಡ್, ಯುಕೆ ಮತ್ತು ರಷ್ಯಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳಿಗೆ ಪಹಲ್ಗಾಮ್ ದಾಳಿಯ ಬಗ್ಗೆ ಮಾಹಿತಿ ನೀಡಿದರು.

ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಎಕ್ಷ್​ ಖಾತೆಯಲ್ಲಿ ಮಾಹಿತಿ ನೀಡಿದ್ದು. “ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಭರತ್​ ಭೂಷಣ್​ ಅಂತ್ಯಕ್ರಿಯೆ: ತಂದೆಯನ್ನು ಕಳೆದುಕೊಂಡು ರೋಧಿಸುತ್ತಿದೆ 3 ವರ್ಷದ ಕಂದಮ್ಮ

ವಿದೇಶಾಂಗ ಇಲಾಖೆಯ ಅಧಿಕಾರಿಗಳು ಜರ್ಮನಿ, ಜಪಾನ್, ಪೋಲೆಂಡ್, ಯುಕೆ, ಯುಎಸ್ಎ ಮತ್ತು ರಷ್ಯಾ ಸೇರಿದಂತೆ ಅನೇಕ ದೇಶಗಳಿಕೆ ಮಾಹಿತಿ ನೀಡಿದ್ದು. ಭಾರತದ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. ಈ ಭಾರಿ ಭಾರತ ಪಾಕಿಗಳ ಮೇಲೆ ನೇರ ದಾಳಿ ನಡೆಸುತ್ತದೆಯೇ ಎಂಬ ಅನುಮಾನಕ್ಕೂ ಈ ಘಟನೆಗಳು ಕಾರಣವಾಗಿದೆ.

ಇದನ್ನೂ ಓದಿ :ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: 3647 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ ಅನುಮೋದನೆ

ಇನ್ನು ಘಟನೆ ಕುರಿತು ಪ್ರಧಾನಿ ಮೋದಿ ಮೊದಲ ಭಾರಿಗೆ ಬಿಹಾರ್​ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದು. ಘಟನೆಗೆ ಕಾರಣರಾದವರನ್ನು ಹುಡುಕಿ ಹೊಡೆಯುತ್ತೇವೆ ಎಂದು ಶಪಥ ಮಾಡಿದ್ದಾರೆ. ಇತ್ತಾ ಪಾಕಿಸ್ತಾನವೂ ಕೂಡ ಭಾರತಕ್ಕೆ ವೀಸಾ ಕ್ಯಾನ್ಸಲ್​ ಮಾಡಿದ್ದು. ವಾಘಾ ಗಡಿಯನ್ನು ಬಂದ್ ಮಾಡಿದೆ.

RELATED ARTICLES

Related Articles

TRENDING ARTICLES