Thursday, January 16, 2025

ಕುಂದಾಪುರದಲ್ಲಿ ಸೆಲ್ಫ್ ಲಾಕ್ ಡೌನ್​ಗೆ ನಿರ್ಧಾರ

ಉಡುಪಿ :ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕುಂದಾಪುರ ವರ್ತಕರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಹೇರಿಕೊಂಡಿದ್ದಾರೆ. ಜುಲೈ 13 ರಿಂದ 31 ವರೆಗೆ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದೆ. ಈ ನಿಟ್ಟಿನಲ್ಲಿ ವರ್ತಕರು‌ ಮತ್ತು ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಭೆ ಕರೆದು ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಎಲ್ಲಾ ವರ್ತಕರು ಒಮ್ಮತದ ನಿರ್ಧಾರ ವ್ಯಕ್ತಪಡಿಸಿದ್ದಾರೆ. ಸದ್ಯ ಸೋಮವಾರದಿಂದ ಕುಂದಾಪುರದಲ್ಲಿ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದ್ದು, ತುರ್ತು ಅಗತ್ಯತೆಯ ಮೆಡಿಕಲ್, ಅಧಿಕೃತ ಮಾರಾಟ ಅಂಗಡಿ, ಹೊಟೇಲ್ ಗಳು ಎಂದಿನಂತೆ ತೆರೆಯಲಿದೆ.

RELATED ARTICLES

Related Articles

TRENDING ARTICLES