ಕೊಡಗು : ಕೊಡಗಿನ ಕಕ್ಕಬ್ಬೆ ಸಮೀಪ ಗಜ ಪಡೆಗಳ ಪುಂಡಾಟ ಮಿತಿಮಿರಿದ್ದು, ಆ ಭಾಗದಲ್ಲಿ ಸರ್ಕಾರಿ ಶಾಲೆ ಕಟ್ಟಡದ ಪಿಲ್ಲರ್ ಹಾಗೂ ಮನೆಯಲ್ಲಿ ನಿಲ್ಲಿಸಿದ ಓಮ್ನಿ ಕಾರಿಗೆ ಹಾನಿ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಇದೀಗ ಗಜ ಪಡೆಗಳ ಉಪಟಳ ಮೀತಿ ಮೀರಿದ್ದು, ಸಾರ್ವಜನಿಕರು ಮದ ಗಜಗಳ ಉಪಟಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ನಡೆಯುತ್ತಲೆ ಇರುತ್ತದೆ. ಆಹಾರ ಅರಸಿ ನಾಡಿಗೆ ಲಗ್ಗೆ ಇಡೋ ಕಾಡನೆಗಳು ಮಾನವನಿಗೆ ಪ್ರತಿನಿತ್ಯ ತೊಂಡರೆ ನೀಡುತ್ತಲೆ ಬರುತ್ತಿದೆ ಅದಕ್ಕೆ ಉದಾಹರಣೆ ಎಂಬಂತ್ತೆ ನಿನ್ನೆ ದಿನ ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ನಾಲಡಿ ಎಂಬಲ್ಲಿ ಗಜರಾಜ ಪುಂಡಾಟ ಮೆರೆದಿದ್ದು ಅಲ್ಲಿನ ಸರ್ಕಾರಿ ಶಾಲೆಯ ಗೋಡೆಗೆ ಹಾನಿ ಮಾಡಿದ್ದು ಶಾಲೆಯ ಪಿಲ್ಲರ್ ದ್ವಂಸ ಗೊಳಿಸಿದೆ. ಹಾಗೆ ನಾಲ್ಕುನಾಡು ಗ್ರಾಮದ ರಾಜು ಎಂಬುವರು ಮನೆಯ ಸಮೀಪ ನಿಲ್ಲಿಸಿದ್ದ ಅವರ ಓಮ್ನಿ ಕಾರಿಗೂ ಹಾನಿ ಮಾಡಿದೆ. ಅಲ್ಲದೆ ಮೊನ್ನೆ ದಿನ ತೋಟದ ಬೇಲಿಯನ್ನ ಕಿತ್ತು ಬಿಸಾಡಿ ಪುಂಡಾಟ ಮೆರೆದ ಗಜ ಪಡೆಗಳು ಮದಕರಿ ರಾಜನ್ ಎಂಬುವರ ಮನೆಯ ಛಾವಣಿಗೂ ಹಾನಿ ನಡೆಸಿವೆ. ಇನ್ನು ಪ್ರತಿನಿತ್ಯ ಈ ಭಾಗದಲ್ಲಿ ಆನೆಗಳ ಉಪಟಳ ಮಿತಿ ಮೀರಿದ್ದು ಆನೆಗಳ ಕಾಟದಿಂದ ನಮ್ಮನ್ನು ರಕ್ಷಿಸಿ ಅಂತ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.