Thursday, April 24, 2025

ಭಾರತದ ಮೇಲೆ ಉಗ್ರ ದಾಳಿ: ಕೇಕ್​ ತಿಂದು ಸಂಭ್ರಮಿಸಿದ ಪಾಕ್​ ರಾಯಭಾರಿ ಕಛೇರಿ ಸಿಬ್ಬಂದಿಗಳು..!

ದೆಹಲಿ :  ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯನ್ನು ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಕೇಕ್ ತಿಂದು ಸಂಭ್ರಮಿಸಿತೇ ಎನ್ನುವ ಅನುಮಾನ ಎಲ್ಲರನ್ನು ಕಾಡಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ದೆಹಲಿಯಲ್ಲಿರುವ ಪಾಕ್ ಹೈ ಕಮಿಷನ್​ ಕಛೇರಿಯಲ್ಲಿ ಉದ್ಯೋಗಿಯೊಬ್ಬ ಕೇಕ್​ ತೆಗೆದುಕೊಂಡು ಹೋಗಿರುವ ದೃಷ್ಯ ವೈರಲ್​ ಆಗಿದೆ. ಈಗಾಗಲೇ ಭಾರತದಲ್ಲಿರುವ ಪಾಕ್ ಹೈ ಕಮಿಷನ್​ ಕಛೇರಿಯನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರ ಆದೇಶ ಹೊರಡಿಸಿದ್ದು. ಪಾಕಿಸ್ತಾನದ 25 ರಾಯಭಾರಿಗಳನ್ನು ಭಾರತದಿಂದ ಉಚ್ಚಾಟಿಸಿದೆ. ಇದರ ನಡುವೆ ಪಾಕ್​ನ ಕುನ್ನಿಗಳು ಭಾರತದ ಮೇಲೆ ನಡೆದಿರುವ ದಾಳಿಯನ್ನು ಕೇಕ್​ ಕತ್ತರಿಸುವ ಮೂಕ ಸಂಭ್ರಮಿಸಿದ್ದಾರೆ.ಇದನ್ನೂ ಓದಿ :ಅಭಿವೃದ್ದಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ: ವಿಪಕ್ಷಗಳಿಂದ ಟೀಕೆ

ವ್ಯಕ್ತಿಯೋರ್ವ ಕೇಕ್​ ಬಾಕ್ಸ್​ ತೆಗೆದುಕೊಂಡು ಹೋಗುವುದನ್ನು ಕಂಡು ಮಾಧ್ಯಮದವರು ಆತನಿಗೆ ಪ್ರಶ್ನಿಸಿದ್ದು. ಈ ಪ್ರಶ್ನೆಗಳಿಗೆ ಆತ ಉತ್ತರಿಸದೆ ಹೋಗಿದ್ದಾನೆ. ಆದ್ದರಿಂದ ಪಹಲ್ಗಾಮ್ ದಾಳಿಯ ಬಗ್ಗೆ ಪಾಕಿಸ್ತಾನ ಸಂತೋಷಗೊಂಡಿದ್ದು, ಅದನ್ನು ಸಂಭ್ರಮಿಸಲು ಭಾರತದಲ್ಲೇ ಕೇಕ್​ ಕತ್ತರಿಸುತ್ತಿದೆಯೇ ಎನ್ನುವ ಊಹಾಪೋಹಗಳು ಎದ್ದಿವೆ. ಸತ್ಯ ಏನೇ ಇರಲಿ, ಪಾಕಿಸ್ತಾನಿ ಉದ್ಯೋಗಿ ಪ್ರತಿಕ್ರಿಯಿಸಲು ವಿಫಲರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ :ಸುರಕ್ಷಿತವಾಗಿ ಕರುನಾಡಿಗೆ ಬಂದು ತಲುಪಿದ 178 ಕನ್ನಡಿಗರು..!

ಜೊತೆಗೆ ಪಾಕಿಸ್ತಾನದ ರಾಯಭಾರ ಕಛೇರಿಗೆ ನೀಡಿದ್ದ ಭದ್ರತೆಯನ್ನ ಭಾರತ ಸರ್ಕಾರ ವಾಪಾಸ್ ಪಡೆದಿದ್ದು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಪಾಕ್​ನ ನಾಗರಿಕರಿಗೆ ದೇಶ ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಅಟಾರಿ-ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ. ಜೊತೆಗ ಪಾಕಿಸ್ತಾನದ ಇಸ್ಲಾಮಾಭಾದ್​ನಲ್ಲಿರುವ ಭಾರತದ ರಾಯಭಾರಿಗಳನ್ನು ವಾಪಾಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES