ದೆಹಲಿ : ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಮತ್ತು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಹಾರಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿಯವರ ಈ ನಡೆ ಕಾಂಗ್ರೆಸ್ ಮತ್ತು ರಾಷ್ಟ್ಟೀಯ ಜನತಾ ದಳದ ಟೀಕೆಗೆ ಗುರಿಯಾಗಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆ ಪ್ರಧಾನಿ ಮೋದಿ ಬಿಹಾರದ ಮಧುಬನಿಯಲ್ಲಿ 13,480 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆದರೆ ಈ ಭೇಟಿಯ ಕುರಿತು ಬಿಹಾರ್ ಕಾಂಗ್ರೆಸ್ ಕಿಡಿಕಾರಿದ್ದು. ದೇಶದಲ್ಲಿ ಭೀಕರ ಭಯೋತ್ಪಾದಕ ದಾಳಿಯಾಗಿ 28 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರವೂ ಶೋಕದಲ್ಲಿದೆ, ಆದರೆ ಪ್ರಧಾನಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಹಾರ್ ಕಾಂಗ್ರೆಸ್ ಎಕ್ಷ್ನಲ್ಲಿ ಕಿಡಿಕಾರಿದೆ.
ಇದನ್ನೂ ಓದಿ :ಸುರಕ್ಷಿತವಾಗಿ ಕರುನಾಡಿಗೆ ಬಂದು ತಲುಪಿದ 178 ಕನ್ನಡಿಗರು..!
ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಆರ್ಜೆಡಿ ಮತ್ತು ಕಾಂಗ್ರೆಸ್. “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಚಿತೆಯನ್ನು ಇನ್ನೂ ಹೊತ್ತಿಸಲಾಗಿಲ್ಲ, ಆದರೆ ಈ ವರ್ಷ ಬಿಹಾರ ಚುನಾವಣೆ ಇರುವುದರಿಂದ ದೇಶದ ಪ್ರಧಾನಿ ಭಾಷಣ ಮಾಡಲು ಬಿಹಾರಕ್ಕೆ ಬರುತ್ತಿದ್ದಾರೆ. ಜನರನ್ನು, ಅಧಿಕಾರಿಗಳನ್ನು ಸಮಾವೇಶಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಡ ರಾಜ್ಯಗಳ ಹಣವನ್ನು ರಾಜಕೀಯ ಕಾರ್ಯಕ್ರಮಗಳಿಗೆ ವ್ಯರ್ಥ ಮಾಡುತ್ತಿವೆ ಎಂದು ಹೇಳಿದ್ದಾರೆ.