Thursday, April 24, 2025

ಸುರಕ್ಷಿತವಾಗಿ ಕರುನಾಡಿಗೆ ಬಂದು ತಲುಪಿದ 178 ಕನ್ನಡಿಗರು..!

ದೇವನಹಳ್ಳಿ : ಜಮ್ಮು&ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರದಾಳಿಯಿಂದ ಪಾರಾದ ಕನ್ನಡಿಗರು ಸುರಕ್ಷಿತವಾಗಿ ಕರ್ನಾಟಕಕ್ಕೆ ಬಂದಿಳಿದಿದ್ದು. 6E 9198 ನಂಬರ್​ನ ಇಂಡಿಗೋ ವಿಮಾನದಲ್ಲಿ 178 ಕನ್ನಡಿಗರು ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ಸಚಿವ ಸಂತೋಷ್​ ಲಾಡ್​ ನೇತೃತ್ವದಲ್ಲಿ ಪ್ರವಾಸಿಗರು ಸುರಕ್ಷಿತವಾಗಿ ಬಂದಿಳಿದಿದ್ದಾರೆ.

ಶ್ರೀನಗರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿದ್ದಾರೆ. ಸಮಯ 11:55ಕ್ಕೆ ವಿಶೇಷ ವಿಮಾನ ಏರ್​ಪೋರ್ಟ್​ನಲ್ಲಿ ಲ್ಯಾಂಡ್​ ಆಗಿದ್ದು. ಏರ್​ಪೋರ್ಟ್​ನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ :ಧರ್ಮಕ್ಕಿಂತ ಮಾನವೀಯತೆ ಮುಖ್ಯ, ಖರ್ಗೆ ಸರಿಯಾಗಿ ಹೇಳಿಕೆ ನೀಡಿದ್ದಾರೆ: ಪ್ರಹ್ಲಾದ್​ ಜೋಶಿ

ತಕ್ಷಣವೇ ಎಚ್ಚೆತ್ತುಕೊಂಡಿತ್ತು ಕರ್ನಾಟಕ ಸರ್ಕಾರ..!

ಕಾಶ್ಮೀರದಲ್ಲಿ ಮೂವರು ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ತುರ್ತು ನೆರವಿಗೆ ಎಂದು ಸಚಿವ ಸಂತೋಷ್​ ಲಾಡ್​ ನೇತೃತ್ವದಲ್ಲಿ ಅಧಿಕಾರಗಳನ್ನು ಪಹಲ್ಗಾಮ್​ಗೆ ಕಳುಹಿಸಿದ್ದರು.

ವಿಶೇಷ ವಿಮಾನದ ಮೂಲಕ ಕಾಶ್ಮೀರಕ್ಕೆ ತೆರಳಿದ್ದ ಸಂತೋಷ್ ಲಾಡ್​ ಅಲ್ಲಿ ಮೃತಪಟ್ಟ ಕನ್ನಡಿಗರ ಪಾರ್ಥಿವಗಳನ್ನು ಕರ್ನಾಟಕಕ್ಕೆ ರವಾನೆ ಮಾಡಲು ಕ್ರಮ ಕೈಗೊಂಡಿದ್ದರು. ಅಲ್ಲಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರಲು ಕ್ರಮವಹಿಸಿದ್ದರು.

 

RELATED ARTICLES

Related Articles

TRENDING ARTICLES