Thursday, May 15, 2025

ಯೂರೋಪ್​ಗೆ ಹೋಗಬೇಕಿದ್ದ ವಿನಯ್-ಹಿಮಾಂಶಿ​ ವೀಸಾ ರದ್ದು: ಕಾಶ್ಮೀರದಲ್ಲಿ ಕಾದಿತ್ತು ಸಾ*ವು

ಗುರುಗ್ರಾಮ್​: ಜಮ್ಮು ಕಾಶ್ಮೀರದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹನಿಮೂನ್​ಗೆ ಎಂದು ಬಂದಿದ್ದ ನೌಕಾ ಅಧಿಕಾರಿ ವಿನಯ್​ ನರ್ವಾಲ್​ ಸಾವನ್ನಪ್ಪಿದ್ದರು. ಇದೀಗ ಇವರ ಬಗ್ಗೆ ಮತ್ತೊಂದು ಮಾಹಿತಿ ತಿಳಿದು ಬಂದಿದ್ದು. ವಿನಯ್​ ತಮ್ಮ ಪತ್ನಿಯೊಂದಿಗೆ ಯೂರೋಪ್​ಗೆ ಭೇಟಿ ನೀಡಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಮಯಕ್ಕೆ ಸರಿಯಾಗಿ ವೀಸಾ ದೊರೆಯದ ಕಾರಣ ಕೊನೆ ಕ್ಷಣದಲ್ಲಿ ಪತ್ನಿಯೊಂದಿಗೆ ಜಮ್ಮು ಕಾಶ್ಮೀರಕ್ಕೆ ಬಂದಿದ್ದರು. ಇದೀಗ ಈ ನಿರ್ಧಾರವೇ ಅವರ ಸಾವಿಗೆ ಮತ್ತೊಂದು ಕಾರಣವಾಗಿದೆ. 

ಮೂಲತಃ ಹರಿಯಾಣದ ಕರ್ನಾಲ್​ನ ಭುಸ್ಲಿ ಗ್ರಾಮದವರಾದ ವಿನಯ್​. ಮೂರು ವರ್ಷಗಳಿಂದ ಕೊಚ್ಚಿಯ ನೌಕನೆಲೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 40 ದಿನಗಳ ರಜೆ ಮೇಲೆ ಮನೆಗೆ ಬಂದಿದ್ದ ವಿನಯ್​ ಕಳೆದ ಏಪ್ರೀಲ್​ 16ರಂದು ಗುರುಗ್ರಾಮ್​ನ ಹಿಮಾಂಶಿ ಎಂಬುವವರ ಜೊತೆ ವಿವಾಹವಾಗಿದ್ದರು. ವಿವಾಹದ ನಂತರ ಮಸೂರಿಯಲ್ಲಿ ಏಪ್ರೀಲ್​ 19ರಂದು ಆರತಕ್ಷತೆ ನಡೆದಿತ್ತು. ದಂಪತಿಗಳಿಬ್ಬರು ಹನಿಮೂನ್​ಗೆ ಯೂರೋಪ್​ಗೆ ಹೋಗಲು ಯೋಜನೆ ರೂಪಿಸಿದ್ದರು. ಇದನ್ನೂ ಓದಿ:ಭಾರತ ದಾಳಿ ಮಾಡಿದರೆ, ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ: ಮೊಂಡುತನ ಪ್ರದರ್ಶಸಿಸದ ಪಾಕ್​ ಸಚಿವೆ

ಆದರೆ ಇವರು ಸಲ್ಲಿಸಿದ್ದ ವೀಸಾ ಅರ್ಜಿ ರದ್ದಾದ ಕಾರಣ, ಭಾರತದ ಸ್ವಿಜರ್​ಲ್ಯಾಂಡ್​ ಎಂದೇ ಖ್ಯಾತವಾಗಿರುವ ಪಹಲ್ಗಾಮ್​ಗೆ ಹೋಗಲು ದಂಪತಿಗಳು ಸಿದ್ದವಾಗಿದ್ದರು. ಸಿದ್ದತೆಯಂತೆ ಏಪ್ರೀಲ್​ 21ರಂದು ಜಮ್ಮು ಕಾಶ್ಮಿರಕ್ಕೆ ತೆರಳಿದ್ದ ಹಿಮಾಂಶಿ ಮತ್ತು ವಿನಯ್​ ಹೋಟೆಲ್​ ಒಂದರಲ್ಲಿ ತಂಗಿದ್ದರು. ಆದರೆ ವಿಧಿಯಾಟವೆಂಬಂತೆ ಏಪ್ರೀಲ್ 22ರಂದು ಉಗ್ರರು ಈ ಪ್ರದೇಶದ ಮೇಲೆ ದಾಳಿ ನಡೆಸಿದ್ದು. ಉಗ್ರರ ಗುಂಡಿಗೆ ವಿನಯ್​ ಅಸುನೀಗಿದ್ದಾರೆ.

ಮೇ. 01ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ವಿನಯ್​

ಇದನ್ನೂ ಓದಿ :Pahalgam Terror Attack : ಅಮಿತ್​ ಶಾ, ಮೋದಿ ಕಡೆ ಬೊಟ್ಟು ಮಾಡಿದ ಪ್ರಿಯಾಂಕ್​ ಖರ್ಗೆ

ಇದೇ ಮೇ.01ಕ್ಕೆ ವಿನಯ್​ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಮನೆಯಲ್ಲಿ ಭರ್ಜರಿ ಸಿದ್ದತೆಗಳು ಆರಂಭವಾಗಿದ್ದವು. ಹುಟ್ಟುಹಬ್ಬದ ನಂತರ ಮೇ.03ರಂದು ವಿನಯ್​ ಹಿಮಾಂಶಿ ಅವರ ಜೊತೆಗೆ ಕೊಚ್ಚಿಗೆ ತೆರಳಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES