ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ.
ಇದನ್ನೂ ಓದಿ :ಏರ್ಸ್ಟ್ರೈಕ್ ಭೀತಿ: ಸೇನಾ ನೆಲೆಗಳಿಗೆ ಹೆಚ್ಚಿನ ಯುದ್ದ ವಿಮಾನಗಳನ್ನು ನಿಯೋಜಿಸಿದ ಪಾಕ್
ಕಾಶ್ಮೀರದ ಪಹಲ್ಗಾಂಗೆ ಪ್ರವಾಸಕ್ಕೆಂದು ಹೋಗಿದ್ದು ಶಿವಮೊಗ್ಗದ ಮಂಜುನಾಥ್ ಮತ್ತು ಬೆಂಗಳೂರು ನಿವಾಸಿ ಭರತ್ ಭೂಷಣ್ ಎಂಬುವವರು ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವತಿಯಿಂದ ತಲಾ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಕೂಡ ದುರ್ಘಟನೆಯಲ್ಲಿ ಮೃತಪಟ್ಟು ಎಲ್ಲಾ ಪ್ರವಾಸಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.