Thursday, April 24, 2025

ಏರ್​ಸ್ಟ್ರೈಕ್​ ಭೀತಿ: ಸೇನಾ ನೆಲೆಗಳಿಗೆ ಹೆಚ್ಚಿನ ಯುದ್ದ ವಿಮಾನಗಳನ್ನು ನಿಯೋಜಿಸಿದ ಪಾಕ್​

ದೆಹಲಿ: ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯ ಬೆನ್ನಲ್ಲೇ ಪಾಕ್​ ಸೇನೆ ಅಲರ್ಟ್​ ಆಗಿದ್ದು. ಬಾಲಾಕೋಟ್​ ಏರ್​ಸ್ಟ್ರೈಕ್​ ಮಾದರಿಯಲ್ಲಿ ಮತ್ತೊಂದು ಏರ್​ಸ್ಟ್ರೈಕ್​ ಆಗಬಹುದು ಎಂದು ಪಾಕ್​ ತನ್ನ ಗಡಿಗೆ ಯುದ್ದ ವಿಮಾನಗಳು ಸೇರಿದಂತೆ ಸೇನಾ ಉಪಕರಣಗಳನ್ನು ನಿಯೋಜನೆ ಮಾಡುತ್ತಿದ್ದು, ಭಾರತ ದಾಳಿ ನಡೆಸಬಹುದೆಂಬ ಭೀತಿ ಪಾಕ್​ ಕಾಡುತ್ತಿದ್ದೆಯಾ ಎಂಬ ಪ್ರಶ್ನೆ ಉದ್ಬವವಾಗಿದೆ.

ಪಹಲ್ಗಾಮ್‌ ಉಗ್ರರ ದಾಳಿಯ ನಂತರ ಪಾಕಿಸ್ತಾನ ವಾಯುಸೇನೆ ತನ್ನ ಪ್ರಮುಖ ವಿಮಾನಗಳನ್ನು ಭಾರತದ  ಗಡಿಯ ನೆಲೆಗಳಿಗೆ ಸಾಗಿಸುತ್ತಿರುವ ವಿಚಾರ ಫ್ಲೈಟ್‌ರಾಡರ್‌ನಲ್ಲಿ ಗೊತ್ತಾಗಿದೆ. ಪಾಕಿಸ್ತಾನ ವಾಯುಪಡೆಯ ಪ್ರಮುಖ ವಿಮಾನಗಳು ಕರಾಚಿಯ ದಕ್ಷಿಣ ವಾಯು ಕಮಾಂಡ್‌ನಿಂದ ಉತ್ತರದ ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ನೆಲೆಗಳಿಗೆ ಸಂಚರಿಸುತ್ತಿರುವ ಫ್ಲೈಟ್‌ರಾಡರ್ 24 ರ ಸ್ಕ್ರೀನ್‌ಶಾಟ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ :ಷಂಡ ಜಾತ್ಯಾತೀತರು ಖಂಡನೆ ಮಾಡುವ ಬದಲು, ಭದ್ರತಾ ವೈಫಲ್ಯ ಅಂತಿದ್ದಾರೆ : ಯತ್ನಾಳ್​

ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ವಾಯುನೆಲೆಗಳು ಭಾರತೀಯ ಗಡಿಗಳಿಗೆ ಹತ್ತಿರದಲ್ಲಿವೆ. PAF198 ಲಾಕ್‌ಹೀಡ್ C-130E ಹರ್ಕ್ಯುಲಸ್ ಸಾರಿಗೆ ವಿಮಾನವಾಗಿದ್ದರೆ PAF101 ಸಣ್ಣ ಎಂಬ್ರೇರ್ ಫೆನಮ್ 100 ಜೆಟ್ ಅನ್ನು ಸಾಮಾನ್ಯವಾಗಿ ವಿಐಪಿ ಸಾರಿಗೆ ಅಥವಾ ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.

ಇದನ್ನೂ ಓದಿ :ಭಾರತಾಂಬೆಯ ಕಳಶದಂತಿರುವ ಕಾಶ್ಮೀರ ಎಂದಿಗೂ ನಮ್ಮದೆ: ಧ್ರುವ ಸರ್ಜಾ

2019ರ ಫೆಬ್ರವರಿ 14 ರಂದು ಪುಲ್ವಾಮ ದಾಳಿಗೆ ಪ್ರತಿಕಾರವಾಗಿ, ವಾಯುಪಡೆ ಫೆಬ್ರವರಿ 26ರಂದು ಪಾಕಿಸ್ತಾನದ ಖೈಬರ್​ ಪಖ್ತುಂತ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್​ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಕ್​ನ 300ಕ್ಕು ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಪಾಕ್​ಗೆ ಇದೇ ಭೀಯಿ ಶುರುವಾಗಿದೆ.

RELATED ARTICLES

Related Articles

TRENDING ARTICLES