Thursday, April 24, 2025

ಇದು ಸುಮ್ಮನೆ ಕುಳಿತುಕೊಳ್ಳುವ ಸಮಯವಲ್ಲ, ತಕ್ಕ ಉತ್ತರ ಕೊಡುವ ಸಮಯ: ನಟ ಸುದೀಪ್​

ಜಮ್ಮು&ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದಿರುವ ಉಗ್ರರ ದಾಳಿಯ ಬಗ್ಗೆ ಸ್ಯಾಂಡಲ್​ ವುಡ್ ನಟ ಕಿಚ್ಚ ಸುದೀಪ್​ ಆಕ್ರೋಶ ವ್ಯಕ್ತಪಡಿಸಿದ್ದು. ಇದು ಸಂಯಮದಿಂದ ಕುಳಿತುಕೊಳ್ಳುವ ಸಮಯದವಲ್ಲ, ಇದು ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡುವ ಸಮಯ ಎಂದು ಹೇಳಿದರು.

ಘಟನೆ ಕುರಿತು ನಟ ಸುದೀಪ್​ ಎಕ್ಷ್​ ಖಾತೆಯಲ್ಲಿ ಬರೆದುಕೊಂಡಿದ್ದು. ‘ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ ಮಾಡಿದ್ದಾರೆ.

ಇದನ್ನೂ ಓದಿ :ದೇಶದಲ್ಲಿ ಮುಸ್ಲಿಂರಿಗೆ ತೊಂದರೆಯಾಗುತ್ತಿದೆ, ಅದಕ್ಕೆ ದಾಳಿ ಮಾಡಿದ್ದಾರೆ: ರಾರ್ಬಟ್​ ವಾದ್ರ

ಇನ್ನು ಘಟನೆ ಬಗ್ಗೆ ನಟ ಯಶ್​, ಶಿವರಾಜ್​ಕುಮಾರ್​, ರಷ್ಮಿಕಾ ಮಂದಣ್ಣ, ಅನುಷ್ಕಾ ಶರ್ಮ ಸೇರಿದಂತೆ ಹಲವರು ಖಂಡನೆ ವ್ಯಕ್ತಪಡಿಸಿದ್ದು. ಕ್ರಿಕೆಟಿಗರು, ನಟ-ನಟಿಯರು ಸೇರಿದಂತೆ ಇಡೀ ರಾಷ್ಟ್ರವೇ ಪಹಲ್ಗಾಮ್​ನಲ್ಲಿ ನಡೆದಿರುವ ಹೀನಾ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿವೆ.

RELATED ARTICLES

Related Articles

TRENDING ARTICLES