ದೆಹಲಿ : ಜಮ್ಮು&ಕಾಶ್ಮೀರದ ಪಹಲ್ಗಾಮ್ನಲ್ಲಿ ಭೀಕರ ಭಯೋತ್ಪಾದಕ ದಾಳಿಯಾಗಿದ್ದು. ಘಟನೆಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರ ವಿವಾದತ್ಮಕ ಹೇಳಿಕೆ ನೀಡಿದ್ದು. ಕೇಂದ್ರ ಸರ್ಕಾರ ಹಿಂದೂ ಮತ್ತು ಮುಸ್ಲಿಂಮರನ್ನು ವಿಭಜನೆ ಮಾಡಿದ್ದಾರೆ. ಅದಕ್ಕೆ ಹಿಂದೂಗಳ ಮೇಲೆ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಪ್ರವಾಸಿಗರಿಗೆ ಸಂತಾಪ ಸೂಚಿಸಿದ ಅವರು. ಪಹಲ್ಗಾಮ್ನಲ್ಲಿ ದಾಳಿ ಮಾಡಿರುವ ಭಯೋತ್ಪಾದಕರು ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ. ನಮ್ಮ ದೇಶದಲ್ಲಿ ಸರ್ಕಾರ ಹಿಂದುತ್ವದ ಬಗ್ಗೆ ಮಾತನಾಡಿತ್ತಿದೆ. ಇದರಿಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ :ಕಾಶ್ಮೀರಿ ಅಥಿತಿಗಳನ್ನು ಕೊಲ್ಲಬೇಡಿ ಎಂದು ಅಡ್ಡಬಂದ ಮುಸ್ಲಿಂ ಯುವಕ ಉಗ್ರರ ಗುಂಡಿಗೆ ಬಲಿ
ಮುಂದುವರಿದು ಮಾತನಾಡಿದ ರಾರ್ಬಟ್ ವಾದ್ರ ‘ನಡೆದಿರುವ ಭಯೋತ್ಪಾದಕ ದಾಳಿಯನ್ನು ನೋಡಿದರೆ. ಅವರು ಜನರ ಗುರುತನ್ನು ನೋಡಿ ದಾಳಿ ಮಾಡಿದ್ದಾರೆ. ಇದರಿಂದ ಉಗ್ರರು ಯಾಕೆ ದಾಳಿ ನಡೆಸಿದ್ದಾರೆ ಎಂದು ಅರ್ಥವಾಗುತ್ತೆ. ನಮ್ಮ ದೇಶದಲ್ಲಿರುವ ಸರ್ಕಾರ ಹಿಂದೂ ಮತ್ತು ಮುಸ್ಲಿಂಮರನ್ನು ವಿಭಜನೆ ಮಾಡಿದೆ ಇದಕ್ಕೆ ಈ ದಾಳಿ ನಡೆದಿದೆ.
ಇದನ್ನೂ ಓದಿ :ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದ ಉಗ್ರ ದಾಳಿಯಾಗಿದೆ: ಸಿಎಂ ಸಿದ್ದರಾಮಯ್ಯ
ಹಿಂದೂಗಳನ್ನು ಗುರುತಿಸುವ ಮೂಲಕ ದಾಳಿ ಮಾಡಿರುವುದನ್ನು ನೋಡಿದರೆ. ಅವರು ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ನೀಡುತ್ತಿದ್ದಾರೆ. ಏಕೆಂದರೆ ಇಲ್ಲಿ ಮುಸ್ಲಿಂಮರು, ಅಲ್ಪ ಸಂಖ್ಯಾತರು ದುರ್ಬಲರು ಎಂದು ಭಾವಿಸಿದ್ದಾರೆ. ಕೆಲವು ಸಂಘಟನೆಗಳು ಮುಸ್ಲಿಂಮರಿಗೆ ತೊಂದರೆ ನೀಡುತ್ತಿವೆ ಎಂದು ಅವರು ಭಾವಿಸಿದ್ದಾರೆ, ಅದಕ್ಕೆ ಇಂತಹ ದಾಳಿ ನಡೆದಿದೆ. ಈ ದೇಶದಲ್ಲಿ ನಾವೆಲ್ಲೆರೂ ಸುರಕ್ಷಿತರಾಗಿದ್ದೇವೆ ಎಂಬ ನಾಯಕತ್ವ ಬರಬೇಕಿದೆ. ಆಗ ಈ ದೇಶದಲ್ಲಿ ಇಂತಹ ಘಟನೆಗಳು ನೋಡಲು ಸಿಗುವುದಿಲ್ಲ ಎಂದು ರಾಬರ್ಟ್ ವಾದ್ರ ಹೇಳಿದರು.