Tuesday, April 22, 2025

ಗತಿ ಇಲ್ಲದೆ ಕರ್ನಾಟಕಕ್ಕೆ ಬಂದಿರುವ ನೀವೂ ಕನ್ನಡ ಕಲಿಯಲ್ಲ ಅಂದ್ರೆ ಹೇಗೆ: ಪ್ರತಾಪ್​ ಸಿಂಹ

ಮೈಸೂರು : ವಿಂಗ್​ ಕಮಾಂಡರ್​ ಹಲ್ಲೆ ವಿಚಾರವಾಗಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ಉತ್ತರ ಭಾರತೀಯರ ಬಗ್ಗೆ ವಾಗ್ದಾಳಿ ನಡೆಸಿದ್ದು. ಗತಿ ಇಲ್ಲದೆ ಜೀವನ ನಡೆಸೋದಕ್ಕೆ ಇಲ್ಲಿಗೆ ಬರುವ ನೀವೂ ಕನ್ನಡ ಕಲಿಯಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ವಿಂಗ್​ ಕಮಾಂಡರ್​ ಹಲ್ಲೆ ಪ್ರಕರಣದ ಬಗ್ಗೆ ಪ್ರತಾಪ್​ ಸಿಂಹ ಖಡಕ್ ಪ್ರತಿಕ್ರಿಯೆ ನೀಡಿದ್ದು. ‘ಆಕಸ್ಮಿಕ ಅಪಘಾತಕ್ಕೆ ಬೇರೆಯದೆ ಬಣ್ಣ ಕಟ್ಟಿದ್ದಾರೆ. ಇದನ್ನೆ ಸತ್ಯ ಎಂದು ನಂಬಿ ರಾಷ್ಟ್ರೀಯ ಮಾಧ್ಯಮಗಳು ಇದನ್ನು ವೈಭವಿಕರಿಸುವ ಕೆಲಸ ಮಾಡಿದರು. ಈ ಪ್ರಕರಣದಲ್ಲಿ ಕನ್ನಡಿಗರನ್ನು ನಕಾರಾತ್ಮಕವಾಗಿ ಚಿತ್ರಿಸುವ ಕೆಲಸ ಆಗುತ್ತಿದೆ. ಕನ್ನಡಿಗರು ಯಾರ ಮೇಲೂ ದಬ್ಬಾಳಿಕೆ ಮಾಡುವ ಜನ ಅಲ್ಲ. ಕನ್ನಡ ಮಾತಾಡಿ ಎಂದು ಹೇಳಿದ್ದರು ಅದರಲ್ಲಿ ತಪ್ಪೇನಿದೆ.?

ಇದನ್ನೂ ಓದಿ :ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹ*ತ್ಯೆ

ಉತ್ತರ ಭಾರತದಲ್ಲಿ ಒಳ್ಳೆಯ ಇಂಜಿನಿಯರಿಂಗ್ ಕಾಲೇಜ್ ಇಲ್ಲ, ಮೆಡಿಕಲ್ ಕಾಲೇಜ್ ಇಲ್ಲ. ಹೀಗಾಗಿ ಗತಿ ಇಲ್ಲದೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲೆ ವಾಸ ಇದ್ದ ಮೇಲೆ ಕನ್ನಡ ಕಲಿಯೋದು ನಿಮ್ಮ ಕರ್ತವ್ಯ. ಹತ್ತಾರು ವರ್ಷಗಳಿಂದ ಇದ್ದ ಮೇಲೆ ಕನ್ನಡ ಕಲಿಯಬೇಕು ಅಲ್ವಾ? ನೀವು ಇಲ್ಲೆ ಇರಿ ಎಂದು ನಾವೇನೂ ನಿಮ್ಮ ಕೈ ಕಲ್ಲು ಕಟ್ಟಿಲ್ಲ. ಉತ್ತರ ಭಾರತದಲ್ಲಿ ಒಳ್ಳೆ ಕಂಪನಿ ಇಲ್ಲ ಎಂದು ಕರ್ನಾಟಕಕ್ಕೆ ಬಂದಿದ್ದಿರಿ. ನಾವೇನೂ ನಿಮ್ಮನ್ನು ಕರೆದಿಲ್ಲ ಅದು ನೆನಪಿರಲಿ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ ‘ ಇಲ್ಲಿ ಜೀವನ ಬೇಕು, ಆದರೆ ನಮ್ಮ ಭಾಷೆ ಬೇಡ ಅಂದರೆ ಹೇಗೆ. ಇಲ್ಲಿಯ ಭಾಷೆ ಬೇಡ ಅಂದ ಮೇಲೆ ನಿಮ್ಮ ಊರಲ್ಲೆ ಇರಿ. ಭಾಷೆ ಬಗ್ಗೆ ತಾತ್ಸರ ಮಾಡಕೂಡದು.
ಉತ್ತರ ಭಾರತೀಯರು ಈ ರೀತಿ ಮನೋಭಾವ ಬಿಡಬೇಕು. ಭಾಷೆ ಆಧಾರದ ಕನ್ನಡಿಗರು ಯಾವತ್ತೂ ಯಾರ ಮೇಲೂ ದೌರ್ಜನ್ಯ ಮಾಡಿಲ್ಲ. ವಿಂಗ್​ ಕಮಾಂಡರ್​ನನ್ನು ಬಂಧಿಸಬೇಕು. ಆತನಿಂದ ಕನ್ನಡಿಗರ ಕ್ಷಮೆ ಕೇಳಿಸ ಬೇಕು.

ಇದನ್ನು ಓದಿ :ರಾಹುಲ್​ ಗಾಂಧಿಗೆ ಹೊರ ದೇಶದಲ್ಲಿ ಹೇಗೆ ನಡೆದುಕೊಳ್ಳಬೇಕೂ ಎಂಬುದು ಗೊತ್ತಿಲ್ಲ: ವಿಜಯೇಂದ್ರ

ಹಲ್ಲೆ ನಡೆಸಿದ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು. ಉತ್ತರ ಭಾರತೀಯರು ಯಾಕೆ ಚೆನೈ ನಲ್ಲಿ ಬಾಲ ಬಿಚ್ಚಲ್ಲ. ಉತ್ತರ ಭಾರತೀಯರು, ಮಲೆಯಾಳಿಗಳು ಅವರ ಊರಿನಲ್ಲಿ ಗತಿ ಇಲ್ಲದೆ ಇಲ್ಲಿಗೆ ಬಂದಿದ್ದಾರೆ. ತಿನ್ನೋಕು ಅವರಿಗೆ ಅವರ ಊರಿನಲ್ಲಿ ಗತಿ ಇಲ್ಲ. ಅದು ನೆನಪಿರಲಿ. ಒಂದು ವೇಳೆ ಕನ್ನಡಿಗರು ತಿರುಗಿ ನಿಂತರೆ ಯಾವ ಅನ್ಯ ಭಾಷಿಕರಿಗೂ ಇಲ್ಲಿ ಉಳಿಗಾಲ ಇರಲ್ಲ. ಅತಿಯಾಗಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. 1992 ರಲ್ಲಿ ಕನ್ನಡಿಗರು ತಮಿಳರ ಮೇಲೆ ತಿರುಗಿ ಬಿದ್ದಾಗ ಏನಾಯ್ತು ನೆನಪು ಮಾಡಿಕೊಳ್ಳಿ. ಸ್ವಲ್ಪ ಹುಷಾರಾಗಿರಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES