Tuesday, April 22, 2025

ಮಲೈ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಜಿಲ್ಲಾಡಳಿತದಿಂದ ಭರದ ಸಿದ್ದತೆ

ಚಾಮರಾಜನಗರ : ಮೊದಲ ಬಾರಿಗೆ ಮಲೈ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು. ಇದೇ ಏಪ್ರಿಲ್​ 24ರಂದು ಸಭೆ ಜರುಗಲಿದೆ. ಸಚಿವ ಸಂಪುಟ ಸಭೆಗೆ ಜಿಲ್ಲಾಡಳಿತ ಭರದ ಸಿದ್ದತೆ ಕೈಗೊಂಡಿದ್ದು. ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇದೇ ಏಪ್ರೀಲ್​ 24ರಂದು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು. ಸಚಿವ ಸಂಪುಟ ಸಭೆಗೆ ಜಿಲ್ಲಾಡಳಿತ ಹಾಗೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ಕೈಗೊಂಡಿದೆ. ಈಗಾಗಲೇ ಇಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಎರಡು ಭಾರಿ ಮುಂದೂಡಲಾಗಿದ್ದು. ಸಚಿವ ಸಂಪುಟ ಸಭೆ ಮುಂದೂಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು.

ಇದನ್ನೂ ಓದಿ :Mahesh Babu : ಟಾಲಿವುಡ್​ ನಟ ಮಹೇಶ್​ ಬಾಬುಗೆ ಇಡಿ ನೋಟಿಸ್​

ಮಲೈ ಮಹದೇಶ್ವರ ಬೆಟ್ಟದ ವಜ್ರಮಲೆ ಭವನದ ಮುಂಭಾಗದ ಖಾಲಿ ನಿವೇಶನದಲ್ಲಿ ಸಭೆ ನಡೆಸಲು ಸಿದ್ದತೆ ನಡೆಸಲಾಗಿದ್ದು. ಬೆಂಗಳೂರಿನ ವಿಧಾನಸೌಧದಲ್ಲಿರುವ ಕ್ಯಾಬಿನೆಟ್ ಕೊಠಡಿಯಂತೆ ಮಲೆಮಹದೇಶ್ವರ ಬೆಟ್ಟದಲ್ಲಿಯೂ ಸಿದ್ದತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಭೆಗೆ ಹಾಜರಾಗುವ 34 ಸಚಿವರು, ವಿವಿಧ ಇಲಾಖೆಯ ಕಾರ್ಯದರ್ಶಿಗಳಿಗೆ ಅಗತ್ಯ ಸಿದ್ಧತೆ ನಡೆಸಿದ್ದಾರೆ.

ಪಾರ್ಕಿಂಗ್​ಗಾಗಿ ವಜ್ರಮಲೆ ವಸತಿ ಗೃಹದ ಕೆಳ ಹಂತದಲ್ಲಿ 300 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು.
ಅದರ ಪಕ್ಕದಲ್ಲೇ 200 ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಹೆಲಿಪ್ಯಾಡ್​ನೊಂದಿಗೆ ಹಳೆಯೂರಿನಲ್ಲಿ‌ ಮೂರು ತಾತ್ಕಾಲಿಕ ‌ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ.

ಜಿಲ್ಲಾಡಳಿತದಿಂದ ಬಿಗಿ ಭದ್ರತೆ…

ಸಚಿವ ಸಂಪುಟ ಸಭೆಗೆ ಸಿಎಂ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಹಾಜರಾಗಲಿದ್ದು. ಭದ್ರತೆಗಾಗಿ ಪೊಲೀಸ್​ ಸರ್ಪಗಾವಲನ್ನು ನಿರ್ಮಿಸಲಾಗಿದೆ. ಇಬ್ಬರು ಡಿಐಜಿ ,ಇಬ್ಬರು ಎಸ್​ಪಿ, ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 11 ಮಂದಿ ಡಿವೈಎಸ್ಪಿ, 31 ಮಂದಿ ಇನ್ಸ್ಪೆಕ್ಟರ್ ಹಾಗೂ 58 ಸಬ್ ಇನ್ಸ್ಪೆಕ್ಟರ್, ಹಾಗೂ 85 ಎಎಸ್ ಐ ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 2000 ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದ ವಿಂಗ್​ ಕಮಾಂಡರ್​ ವಿರುದ್ದ ಕೊಲೆಯತ್ನ ಪ್ರಕರಣ ದಾಖಲು

ಸಿಎಂ ಜಿಲ್ಲಾಪ್ರವಾಸ..!

ಸಚಿವ ಸಂಪುಟ ಸಭೆಯ ಜೊತೆಗೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು. ಏಪ್ರೀಲ್​ 24 ಮತ್ತು 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 24ರಂದು ಸಭೆಯಲ್ಲಿ ಭಾಗವಹಿಸುವ ಸಿಎಂ 25ರಂದು ಚಾಮಾರಾಜನಗರದಲ್ಲಿ ಬಸವೇಶ್ವರ ಪ್ರತಿಮೆ ಉದ್ಘಾಟಿಸಲಿದ್ದಾರೆ ಹಾಗೂ ಮಹರ್ಷಿ‌ ವಾಲ್ಮೀಕಿ, ಕನಕದಾಸರು‌ ಹಾಗೂ ಭಗೀರಥ ಪ್ರತಿಮೆ‌ ನಿರ್ಮಾಣಕ್ಕೆ‌ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.

 

 

RELATED ARTICLES

Related Articles

TRENDING ARTICLES