ಬೆಂಗಳೂರು: ಪವರ್ ಟಿವಿ ವಿಸ್ತೃತವಾಗಿ ಭಿತ್ತರಿಸಿದ್ದ ಸ್ಮಾರ್ಟ್ ಮೀಟರ್ ಹಗರಣ ಸಂಬಂಧ ರಾಜ್ಯ ಬಿಜೆಪಿ ಕೆ.ಜೆ ಜಾರ್ಜ ವಿರುದ್ದ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಗೆ ದೂರು ನೀಡಿದೆ. ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ಹಗರಣವಾಗಿದ್ದು. ಈ ಕುರಿತಾದ ತನಿಖಾ ವರದಿಯನ್ನು ಪವರ್ ಟಿವಿ ಸುದೀರ್ಘವಾಗಿ ಭಿತ್ತರಿಸಿತ್ತು.
ಶಾಸಕರಾದ ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ನೇತೃತ್ವದ ನಿಯೋಗದಿಂದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್, ಗೌರವ್ ಗುಪ್ತಾ, ಟೆಕ್ನಿಕಲ್ ಡೈರೆಕ್ಟರ್ ಮಹಾಂತೇಶ್ & ಬಾಲಾಜಿ ಮೇಲೆ ದೂರು ನೀಡಲಾಗಿದೆ.
ಇದನ್ನೂ ಓದಿ :ಬಿಜೆಪಿಯಲ್ಲಿ ಮುಂದುವರಿದ ಒಳಜಗಳ: ಒಗ್ಗಟ್ಟಿನ ಮಂತ್ರ ಜಪಿಸಿದ ವಿಜಯೇಂದ್ರ
ಶಾಸಕ ಅಶ್ವಥ್ ನಾರಾಯಣ..!
ಈ ಕುರಿತು ಶಾಸಕ ಸಿಎನ್ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದು. “ಇಂಧನ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಿದೇವೆ. ಇಂಧನ ಸಚಿವ ಕೆಜೆ ಜಾರ್ಜ್ ಆರೋಪಿ ನಂಬರ್ 1, ಗೌರವ್ ಗುಪ್ತಾ ಆರೋಪಿ 2, ಟೆಕ್ನಿಕಲ್ ಡೈರೆಕ್ಟರ್ ಮಹಂತೇಶ್, & ಬಾಲಾಜಿ ಮೇಲೆ ದೂರು ಸಲ್ಲಿಸಿದ್ದೇವೆ. ಕಂಬ ತಯಾರಿಸುವ ರಾಜಶ್ರೀ ಕಂಪನಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಟೆಂಡರ್ ನೀಡಿದ್ದಾರೆ.
ಈ ಟೆಂಡರ್ನಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ. ಒಂದು ಬ್ಲಾಕ್ ಲಿಸ್ಟ್ ಕಂಪನಿ ಟೆಂಡರ್ಗೆ ನೀಡಿದ್ದಾರೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಭ್ರಷ್ಟಚಾರದ ವಿರುದ್ದ ನಾವು ಸದಾ ಯುದ್ದ ಮಾಡಿದ್ದೇವೆ. ಸಚಿವ ಜಾರ್ಜ್ ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.