ನವದೆಹಲಿ : ಹಿಂಸಚಾರ ಪೀಡಿತ ಪಶ್ಚಿವ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೂ ಎಂಬ ಅರ್ಜಿಯನ್ನು ವಿಚಾರಿಸಿದ ಸರ್ವೋಚ್ಚ ನ್ಯಾಯಾಲಯ. ಈಗಾಗಲೇ ಕಾರ್ಯಂಗದ ಮೇಲೆ ಅತಿಕ್ರಮಣ ಮಾಡುತ್ತಿದ್ದೇವೆ ಎಂಬ ಆರೋಪ ನಮ್ಮ ಮೇಲಿದೆ. ಈಗಿರುವಾಗ ನಾವು ಈ ಆದೇಶ ಹೊರಡಿಸಬೇಕೂ ಎಂದು ನೀವು ಬಯಸುತ್ತಿರಾ? ಎಂದು ಕೇಳಿದರು.
ವಕೀಲ ವಿಷ್ಣು ಶಂಕರ್ ಜೈನ್ ಅವರು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ “ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಅವರ ದ್ವಿಸದಸ್ಯ ಪೀಠ, ನೀವು ರಾಷ್ಟ್ರಪತಿ ಆಳ್ವಿಕೆ ಏರಬೇಕೂ ಎಂದು ಬಯಸುತ್ತೀರಾ? ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ ಎಂದು ಸೂಚ್ಯವಾಗಿ ಹೇಳಿದರು.
ಇದನ್ನೂ ಓದಿ :ಕೃಷ್ಣ ದೇವರಾಯರ ಸಮಾಧಿ ಮೇಲೆ ಮಾಂಸ ಸ್ವಚ್ಚತೆ: ಯತ್ನಾಳ್ ಆಕ್ರೋಶ
ನ್ಯಾ, ಬಿ.ಆರ್ ಗವಾಯಿ ಅವರು ಈ ಹೇಳಿಕೆ ನೀಡಿದ್ದು ಸಾಕಷ್ಟು ಮಹತ್ವ ಪಡೆದುಕೊಂಡಿದ್ದು. ಇವರು ಮುಂದಿನ ತಿಂಗಳು ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅವಧಿಯಲ್ಲಿ ವಕ್ಫ್ ಕಾಯ್ದೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯಾಗುವ ಸಾಧ್ಯತೆ ಇದೆ.