ಮೈಸೂರು : ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಕನ್ನಡ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ಜಲಪಾತ ಭೋರ್ಗರೆಯುತ್ತಾ ಮನಸೂರೆಗೊಳ್ಳುತ್ತಿದೆ. ಕಾವೇರಿ ಜಲಾಯನದ ಪ್ರದೇಶದಿಂದ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರು ಕಾವೇರಿ ನದಿಗೆ ಸೇರುತ್ತಿದೆ. ಕಾವೇರಿ ಕಣಿವೆಯಲ್ಲಿರುವ ಚುಂಚನಕಟ್ಟೆ ಜಲಪಾತ ರುದ್ರರಮಣೀಯವಾಗಿ ಕಂಗೊಳಿಸುತ್ತಿದೆ. ಪ್ರವಾಸಿ ತಾಣವಾಗಿರುವ ಚುಂಚನಕಟ್ಟೆ ಜಲಪಾತದ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರೇ ಬರುತ್ತಿಲ್ಲ. ಕೊರೊನಾ ಎಫೆಕ್ಟ್ ನಿಂದಾಗಿ ಬಣಗುಡುತ್ತಿದೆ ಪ್ರವಾಸಿ ಕೇಂದ್ರ.
ಪ್ರತಿವರ್ಷ ಇಲ್ಲಿ ನಡೆಯುತ್ತದೆ ಜಲಪಾತೋತ್ಸವ :
ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದ ತಾಣವೀಗ ಖಾಲಿ ಖಾಲಿಯಾಗಿದೆ.
ಸುಮಾರು 10 ಕೋಟಿ ವೆಚ್ಚದಲ್ಲಿ ಪ್ರವಾಸಿ ಕೇಂದ್ರ ಅಭಿವೃದ್ದಿಪಡಿಸಲಾಗುತ್ತಿದೆ. ವೀಕೆಂಡ್ ಗಳಲ್ಲಿ ತುಂಬಿ ತುಳುಕುತ್ತಿದ್ದ ನಿಸರ್ಗ ಪ್ರೇಮಿಗಳು ಇತ್ತ ಸುಳಿಯುತ್ತಿಲ್ಲ. ಪ್ರವಾಸಿ ಕೇಂದ್ರಗಳನ್ನೂ ಸ್ಥಬ್ಧವಾಗುವಂತೆ ಮಾಡಿದೆ ಕೊರೊನಾ ಮಹಾಮಾರಿ…