Tuesday, April 22, 2025

ಭಾರತೀಯ ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ‘ಕರ್ನಾಟಕ ಏಕೆ ಹೀಗಾಯಿತು’ ಎಂದು ಪ್ರಶ್ನಿಸಿದ ಸೈನಿಕ

ಬೆಂಗಳೂರು: ಸೇನಾ ಅಧಿಕಾರಿಯೊಬ್ಬರಿಗೆ ಬೆಂಗಳೂರಿನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಧಿಕಾರಿಯು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಗುಂಪೊಂದು ಹಲ್ಲೆ ಮಾಡಿದೆ ಎನ್ನಲಾಗಿದೆ. ಈ ಕುರಿತಾ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವಿಡಿಯೋವನ್ನು ಅಮಿತಾಬ್​ ಚೌದರಿ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, “ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಅಥವಾ ಗುಂಪುಗಳು ಭಾಷೆ, ಜಾತಿ ಮತ್ತು ರಾಜಕಾರಣದ ಹೆಸರಿನಲ್ಲಿ ಒಡೆದು ಆಳುವುದು ಕರ್ನಾಟಕ ಮತ್ತು ಭಾರತಕ್ಕೆ ಹಾನಿಕಾರಕ” ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ ನಿಧನ

ವಿಡಿಯೋದಲ್ಲಿ ಏನಿದೆ ..! 

ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಗೊಳಗಾದ ಯೋದ ಪೋಸ್ಟ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು. ಈ ವಿಡಿಯೋದಲ್ಲಿ ಮಾತನಾಡಿರುವ ಅವರು “ನಾವು ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ DRDO ಕಾಲೋನಿಯಲ್ಲಿ ವಾಸವಾಗಿದ್ದು, ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೆವು. ಈ ವೇಳೆ ಕೆಲವರು ನಮ್ಮ ಕಾರನ್ನು ಬೈಕ್​ನಲ್ಲಿ ಹಿಂಭಾಲಿಸಿಕೊಂಡು ಬಂದು ಕಾರ್​ನ ಮುಂದೆ ಬೈಕ್​ ಅಡ್ಡಗಟ್ಟಿ ನಮ್ಮ ಮೇಲೆ ಕನ್ನಡದಲ್ಲಿ ಬೈಯಲು ಆರಂಭಿಸಿದರು. ಆಗ ಕಾರಿನಿಂದ ಕೆಳಗೆ ಇಳಿದ ನನ್ನ ಹಣೆಗೆ ಗಾಡಿಯ ಕೀಲಿಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ :ಅಮೆರಿಕಾದಲ್ಲಿ ಕುಳಿತು ಭಾರತದ ಚುನಾವಣಾ ಪ್ರಕ್ರಿಯೆ ಬಗ್ಗೆ ರಾಹುಲ್​ ಗಂಭೀರ ಆರೋಪ

ಮುಂದುವರಿದು ಮಾತನಾಡಿರುವ ಅವರು “ಆಗ ನಾನು, ಗಡಿಯಲ್ಲಿ ನಿಂತು ನಾನು ನಿಮ್ಮನ್ನು ರಕ್ಷಿಸುತ್ತೇನೆ. ನಮ್ಮ ಜೊತೆ ನೀವು ಈ ರೀತಿ ವರ್ತಿಸುವುದು ಸರಿಯಲ್ಲ. ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳನ್ನು ಏಕೆ ಈ ರೀತಿ ನಡೆಸಿಕೊಳ್ಳುತ್ತೀರಿ ಎಂದು ಕೂಗಿದೆ. ಬಳಿಕ ಅಲ್ಲಿಗೆ ಬಂದ ಜನರು ನಮನ್ನು ನಿಂದಿಸಲು ಆರಂಭಿಸಿದರು. ನಂತರ ಬೈಕ್​ ಸವಾರನೊಬ್ಬ ಕಲ್ಲಿನಿಂದ ನನ್ನ ಕಾರನ್ನು ಒಡೆಯಲು ಪ್ರಯತ್ನಿಸಿದನು. ಆದರೆ ಅದು ನನ್ನ ತಲೆಗೆ ಬಡಿದು ರಕ್ತ ಬಂದಿದೆ”.

“ಈ ವೇಳೆ ಮಧ್ಯ ಪ್ರವೇಶಿಸಿದ ನನ್ನ ಹೆಂಡತಿ, ನನ್ನನ್ನು ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋದರು. ನಾವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದೆವು. ಆದರೆ, ಅಲ್ಲಿ ನಮಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಎಂದು ಹೇಳಿದರು. ವಿಡಿಯೋದಲ್ಲಿ ಕೊನೆಯಲ್ಲಿ ಕರ್ನಾಟಕ ಏಕೆ ಹೀಗಾಯಿತು ಎಂದು ಈ ಅಧಿಕಾರಿ ಪ್ರಶ್ನಿಸಿದ್ದು. ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ ಈ ಘಟನೆಗೆ ನಾನೂ ಪ್ರತಿಕಾರ ತೀರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದು. ಯೋಧನ ಮೇಲಿನ ಹಲ್ಲೆಯನ್ನು ಖಂಡಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES