Tuesday, April 22, 2025

ಅಮೆರಿಕಾದಲ್ಲಿ ಕುಳಿತು ಭಾರತದ ಚುನಾವಣಾ ಪ್ರಕ್ರಿಯೆ ಬಗ್ಗೆ ರಾಹುಲ್​ ಗಂಭೀರ ಆರೋಪ

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೆ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ದೂರಿದ್ದಾರೆ. ಅಮೇರಿಕಾದ ಬೋಸ್ಟನ್​ನಲ್ಲಿ ಮಾತನಾಡಿದ ರಾಹುಲ್​ ಚುನಾವಣಾ ಆಯೋಗ ರಾಜಿ ಮಾಡಿಕೊಂಡಿದೆ ಎಂದು ದೂರಿದ್ದಾರೆ. ಈ ಮೂಲಕ ಭಾರತದ ಚುನಾವಣ ಪ್ರಕ್ರಿಯೆಯನ್ನು ಅವಮಾನಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿದ ರಾಹುಲ್​ ಗಾಂಧಿ “ಮಹಾರಾಷ್ಟ್ರದಲ್ಲಿ ವಯಸ್ಕರಿಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗವು ಸಂಜೆ 5:30 ಕ್ಕೆ ಮತದಾನದ ಅಂಕಿಅಂಶವನ್ನು ನೀಡಿತು. ಆದರೆ ನಂತರ ಸಂಜೆ 5:30 ರಿಂದ 7:30 ರ ನಡುವೆ 65 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಭೌತಿಕವಾಗಿ ಅಸಾಧ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ ನಿಧನ

ಬಿಜೆಪಿ ಪ್ರತಿಕ್ರಿಯೆ..!

ದೇಶದ ಚುನಾವಣಾ ಪ್ರಕ್ರಿಯೆಯ ಬಗ್ಗೆ ರಾಹುಲ್ ಗಾಂಧಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ‘ರಾಹುಲ್​ ಗಾಂಧಿ ಪ್ರಜಾಪ್ರಭುತ್ವ ವಿರೋಧಿ, ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಭಾರತೀಯ ಮತದಾರರ ವಿಶ್ವಾಸ ಗಳಿಸಲು ಸಾಧ್ಯವಾಗದೆ, ವಿದೇಶದಲ್ಲಿ ಕುಳಿತು ಭಾರತೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES