Tuesday, April 22, 2025

ಪತಿಗೆ ಮಸ್ತಾನ ಎಂಬ ಉಗ್ರನ ಸಂಪರ್ಕವಿದೆ, NIA ಮೂಲಕ ತನಿಖೆ ಮಾಡಿಸಿ: ಓಂ ಪ್ರಕಾಶ್​ ಪತ್ನಿ ಪಲ್ಲವಿ

ಬೆಂಗಳೂರು: ನಗರದ 38ನೇ ಡಿಜಿ-ಐಜಿಪಿಯಾಗಿದ್ದ ಓಂ ಪ್ರಕಾಶ್​ ಹತ್ಯೆಯಾಗಿದ್ದು. ಸ್ವಂತ ಪತ್ನಿಯೇ ಗಂಡನನ್ನು ಕೊಲೆ ಮಡಿದ್ದಾಳೆ. ಇದೀಗ ಓಂ ಪ್ರಕಾಶ್​ಗೆ ಉಗ್ರರ ಸಂಪರ್ಕವಿದ್ದು. ಅವರ ಮೇಲೆ ರಾಷ್ಟ್ರೀಯ ತನಿಖಾ ದಳ ಕೇಸ್​ ದಾಖಲಿಸಬೇಕೂ ಎಂದು ವಾಟ್ಸಪ್​ನಲ್ಲಿ ಪತ್ನಿ ಪಲ್ಲವಿ ಮಾಡಿದ್ದ ಮಸೇಜ್ ಬೆಳಕಿಗೆ ಬಂದಿದೆ.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿ ಪಲ್ಲವಿ ಪೊಲೀಸ್ ಆಫೀಸರ್ಸ್ ವೈಫ್ ಅಸೋಸಿಯೇಷನ್ ಗ್ರೂಪ್‌ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು. ನಿಷೇದಿತ ಉಗ್ರ ಸಂಘಟನೆ ಪಿಎಫ್​ಐ ಮತ್ತು ಉಗ್ರರೊಂದಿಗೆ ಪತಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ಮೆಸೇಜ್ ಮಾಡಿದ ನಂತರ ಪಲ್ಲವಿಯನ್ನು ಆ ಗ್ರೂಪ್​ನಿಂದ ರಿಮೂವ್​ ಮಾಡಲಾಗಿದೆ. ಇದನ್ನೂ ಓದಿ :ವಿಡಿಯೋ ಬಿಡುಗಡೆ ಮಾಡುವುದಾಗಿ ಲವರ್​ ಬೆದರಿಕೆ: ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹ*ತ್ಯೆ

ಮಸ್ತಾನ ಎಂಬ ಉಗ್ರನೊಂದಿಗೆ ಓಂ ಪ್ರಕಾಶ್​ಗೆ ಸಂಬಂಧವಿದೆ ಎಂದು ಪತ್ನಿ ಆರೋಪಿಸಿದ್ದು. ವಾಟ್ಸಪ್​ ಗ್ರೂಪ್​ನಲ್ಲಿ ಹರಿದಾಡುತ್ತಿರುವ ಮೆಸೆಜ್​ಗಳು ಪಲ್ಲವಿಯೇ ಮಾಡಿದ್ದ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂತಿಮ ದರ್ಶನಕ್ಕೆ ಸಿದ್ದತೆ.!

ಇದನ್ನೂ ಓದಿ :ಕುಟುಂಬ ಸಮೇತ ಭಾರತಕ್ಕೆ ಬಂದಿಳಿದ ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವಾನ್ಸ್​

ಮೃತ ಡಿಜಿ-ಐಜಿಪಿ ಓಂ ಪ್ರಕಾಶರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು. ಎಚ್​ಎಸ್​ಆರ್​ ಲೇಔಟ್​ನಲ್ಲಿರುವ ಟೆನ್ನಿಸ್​ ಕೋರ್ಟ್​ನಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ದತೆ ನಡೆಸಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ವಿಐಪಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಿದ್ದು. ಮಧ್ಯಾಹ್ನ 3 ಗಂಟೆಗೆ ವಿಲ್ಸನ್​ ಗಾರ್ಡನ್​ ವಿದ್ಯುತ್​ ಚಿತಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES