ದೆಹಲಿ : ಟ್ಯಾರಿಫ್ ಬಿಸಿಯ ನಡುವೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ತಮ್ಮ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದು. ಇಂದಿನಿಂದ ಏಪ್ರೀಲ್ 24ರವರೆಗೆ ಭಾರತದಲ್ಲಿರಲಿದ್ದಾರೆ. ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಜೆ,ಡಿ ವ್ಯಾನ್ಸ್ಗೆ ಗಾಡ್ ಆಪ್ ಹಾನರ್ ನೀಡಿ ಸ್ವಾಗತಿಸಿದ್ದು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೆ.ಡಿ ವ್ಯಾನ್ಸ್ರನ್ನು ಸ್ವಾಗತಿಸಿಕೊಂಡರು.
ಜೆ.ಡಿ ವ್ಯಾನ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವೀಪಕ್ಷಿಯ ಮಾತುಕತೆ ಸೇರಿದಂತೆ ಅನೇಕ ಕಾರ್ಯಕ್ರಮದಲ್ಲಿ ಜೆ,ಡಿ ವ್ಯಾನ್ಸ್ ಪಾಳ್ಗೊಳ್ಳಲಿದ್ದು. ಆಗ್ರಾ, ಜೈಪುರ್ ಮುಂತಾದ ಸ್ಥಳಗಳಿಗೂ ಅವರು ತೆರಳಲಿದ್ದಾರೆ. ಜೆ.ಡಿ. ವ್ಯಾನ್ಸ್ ಅವರ ಜೊತೆ ಪತ್ನಿ ಉಷಾ ಹಾಗೂ ಮೂವರು ಮಕ್ಕಳು ಇರಲಿದ್ದಾರೆ. ಜೊತೆಗೆ ಅಮೆರಿಕದ ಅಧಿಕಾರಿಗಳ ತಂಡವೂ ಇರಲಿದೆ.
ಇದನ್ನೂ ಓದಿ :ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ: ಪುಡ್ ಡೆಲಿವರಿ ಬಾಯ್ ಸಾ*ವು
ಏಪ್ರೀಲ್ 22, ಮಂಗಳವಾರ ಜೈಪುರದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆನಿಸಿದ ಆಮರ್ ಕೋಟೆಗೆ ಜೆ,ಡಿ ವ್ಯಾನ್ಸ್ ಪ್ರವಾಸ ಹೋಗಲಿದ್ದಾರೆ. ಮಂಗಳವಾರ ಮಧ್ಯಾಹ್ನದಂದು ಜೈಪುರದಲ್ಲೇ ಇರುವ ರಾಜಸ್ಥಾನ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಏಪ್ರೀಲ್ 23 ರಂದು ದೆಹಲಿ ಬಳಿ ಇರುವ ಆಗ್ರಾಗೆ ಹೋಗಲಿದ್ದಾರೆ. ಇಲ್ಲಿ ತಾಜ್ ಮಹಲ್, ಶಿಲ್ಪಗ್ರಾಮ್ಗೆ ಭೇಟಿ ಕೊಡಬಹುದು ಎಂದು ತಿಳಿದು ಬಂದಿದೆ.
ದ್ವೀಪಕ್ಷೀಯ ಮಾತುಕತೆ..
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂಕಿತ ಹಾಕುವ ಒಂದು ಮುಖ್ಯ ಅಜೆಂಡಾ ಈ ಭೇಟಿಯ ಹಿಂದಿದೆ. ಇದರ ಜೊತೆಗೆ, ಎರಡೂ ದೇಶಗಳ ನಡುವಿನ ಮೈತ್ರಿಯನ್ನು ಗಟ್ಟಿಗೊಳಿಸಲು ವಿಧಗಳನ್ನು ಅವಲೋಕಿಸುವ ಸಾಧ್ಯತೆ ಇದೆ. ವ್ಯಾಪಾರ, ರಕ್ಷಣೆ, ಸುಂಕ ಇತ್ಯಾದಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಇಂದು (ಏ.21) ಸಂಜೆ 6:30ಕ್ಕೆ ಮೋದಿ ಮತ್ತು ವ್ಯಾನ್ಸ್ ಭೇಟಿ ವೇಳೆ ಈ ವಿಚಾರಗಳ ಮಾತುಕತೆ ಆಗಬಹುದು. ಇದಾದ ಬಳಿಕ ಔತಣಕೂಟ ಇರುತ್ತದೆ.
ಇದನ್ನೂ ಓದಿ :ವಿಡಿಯೋ ಬಿಡುಗಡೆ ಮಾಡುವುದಾಗಿ ಲವರ್ ಬೆದರಿಕೆ: ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹ*ತ್ಯೆ
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಮಾತುಕತೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.