Tuesday, April 22, 2025

ವಿಡಿಯೋ ಬಿಡುಗಡೆ ಮಾಡುವುದಾಗಿ ಲವರ್​ ಬೆದರಿಕೆ: ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹ*ತ್ಯೆ

ಗದಗ : ಲವರ್​ ಬ್ಲಾಕ್​ಮೇಲ್​ಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದ್ದು. ಆತ್ಮಹತ್ಯೆಗೆ ಶರಣಾದ ಯುವತಿಯನ್ನು 29 ವರ್ಷದ ಸೈರಬಾನು ನದಾಫ್​ ಎಂದು ಗುರುತಿಸಲಾಗಿದೆ.

ಗದಗ ಜಿಲ್ಲೆಯ, ಅಸುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಯುವತಿ ಸೈರಭಾನು ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಖ್ಯಾತಿ ಪಡೆದಿದ್ದ ಸೈರಭಾನು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದಳು. ಮನೆಯಲ್ಲಿ ಗಂಡುಮಕ್ಕಳು ಇಲ್ಲದ ಕಾರಣ ಮನೆಯ ಎಲ್ಲಾ ಜವಬ್ದಾರಿಗಳನ್ನು ತಾನೇ ಹೊತ್ತಿದ್ದಳು.

ಇದನ್ನೂ ಓದಿ :ಗಬ್ಬರ್​ ಸಿಂಗ್​ ಬಗ್ಗೆ ಮಂಗಳವಾರ ಮಾತಾಡ್ತೀನಿ : ಮಾಜಿ ಸಂಸದ ಡಿ.ಕೆ ಸುರೇಶ್​​

ಕಳೆದ 5 ವರ್ಷದ ಪ್ರೀತಿ..!

ಕಳೆದ 5 ವರ್ಷಗಳಿಂದ ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದ ಸೈರಾಭಾನು. ಕಳೆದ ಕೆಲ ದಿನಗಳ ಹಿಂದೆ ಆತನಿಂದ ಬ್ರೇಕ್​ಅಪ್​ ಮಾಡಿಕೊಂಡಿದ್ದಳು. ಬ್ರೇಕ್​ಮಾಡಿಕೊಂಡ ನಂತರ ಮನೆಯಲ್ಲಿ ನೋಡಿದ್ದ ಯುವಕನನ್ನು ಒಪ್ಪಿದ್ದ ಈಕೆ ಮದುವೆಗೂ ಸಿದ್ದತೆ ನಡೆಸಿದ್ದಳು. ಆದರೆ ಪ್ರೇಯಸಿಯ ಮದುವೆ ತಿಳಿದು ಆಕ್ರೋಶಗೊಂಡಿದ್ದ ಮೈಲೇರಿ ಇಬ್ಬರು ಜೊತೆಗಿದ್ದ ಪೋಟೋ, ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದನು.

ಇದರಿಂದ ಮಾನಸಿಕವಾಗಿ ಖಿನ್ನಳಾಗಿದ್ದ ಸೈರಾಭಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದು, ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ :ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? : ಅನುರಾಗ್‌ ಕಶ್ಯಪ್‌ ವಿವಾದಾತ್ಮಕ ಪೋಸ್ಟ್​

ಪೋಷಕರ ಆಕ್ರೋಶ..!

ಕೊನೆಯ ಮಗಳಾಗಿದ್ದ ಸೈರಾಭಾನು ಮದುವೆಯ ಬಗ್ಗೆ ಕನಸು ಕಟ್ಟಿಕೊಂಡಿದ್ದ ಪೋಷಕರು. ಮದುವೆಗೆ ಅದ್ದೂರಿ ತಯಾರಿ ನಡೆಸಿದ್ದರು. ಆದರೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು. ಬ್ಲಾಕ್​ಮೇಲ್​ ಮಾಡಿದ ಯುವಕನಿಗೆ ಗಲ್ಲು ಶಿಕ್ಷೆಯಾಗಬೇಕೂ ಎಂದು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯೀಗ ಸೂತಕದ ಛಾಯೆಯಲ್ಲಿ ಮುಳುಗಿದೆ.

RELATED ARTICLES

Related Articles

TRENDING ARTICLES