ಬೆಂಗಳೂರು: ಆತ ವೃತ್ತಿಯಲ್ಲಿ ಟೀಚರ್, ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕಿ ಜೊತೆ ಸೇರಿ ಹಣ ಇನ್ವೆಸ್ಟ್ ಮಾಡಿ, ಪಾರ್ಟನರ್ ಆಗಿದ್ದ ಎಂಟು ವರ್ಷಗಳ ಕಾಲ ಜೊತೆಯಲ್ಲಿ ಕಾಲ ಕಳೆದಿದ್ದಾರೆ ಗಂಡನಿಂದ ದೂರವಾಗಿದ್ದ ಆಕೆ ಅವೈಡ್ ಮಾಡ್ತಿದ್ದಾಳೆಂದು ಆತ ಸೂಸೈಡ್ ಮಾಡಿಕೊಂಡಿದ್ದಾನೆ ಹಾಗಾದ್ರೆ ಇಲ್ಲಿ ಆಗಿದ್ದಾದ್ರು ಏನು. ಆತ ಯಾಕೆ ಸೂಸೈಡ್ ಮಾಡಿಕೊಂಡಿದ್ದಾನೆ.
ನೆಲಮಂಗಲದ ಮಾಕಳಿಯಲ್ಲಿ ಆನಂದ್ ಜೊತೆ ಸೇರಿ ಟ್ಯೂಷನ್ ಸೆಂಟರ್ ನಡೆಸಿತ್ತಿದ್ದರು, ಹೀಗೆ ಇರಬೇಕಾದ್ರೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಮೊದಲೇ ಗಂಡನಿಂದ ದೂರುವಾಗಿದ್ದ ಮಹಿಳೆ ಈತ ಮತ್ತಷ್ಟು ಹತ್ತಿರವಾಗಿದ್ದಾನೆ. ಇನ್ನಷ್ಟು ಡೆವಲಪ್ ಮಾಡೋಣ ಎಂದು ಟ್ಯೂಷನ್ ಸೆಂಟರ್ಗೆ ಹಣ ಹಾಕಿದ್ದಾನೆ. ಜೊತೆಗೆ ಮನೆಯಿಂದಲೂ ಕೂಡ ಐದು ಲಕ್ಷ ಹಣ ತಂದು ಕೊಟ್ಟಿದ್ದಾನೆ. ಎಂಟು ವರ್ಷಗಳಿಂದ ಜೊತೆಯಲ್ಲಿಯೇ ಕಾಲ ಕಳೆದಿದ್ದಾರೆ. ಆದರೆ, ಇತ್ತೀಚೆಗೆ ಆನಂದ್ ನನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ಮನಸ್ತಾಪ ಬಂದು ಜಗಳವಾಗಿದೆ. ನನ್ನನ್ನು ಬಿಟ್ಟು ಬೇರೆಯೊಬ್ಬನ ಜೊತೆ ಸಲುಗೆಯಿಂದ ಇದೆಯಾ ಎಂದು ಜಗಳ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಗಬ್ಬರ್ ಸಿಂಗ್ ಬಗ್ಗೆ ಮಂಗಳವಾರ ಮಾತಾಡ್ತೀನಿ : ಮಾಜಿ ಸಂಸದ ಡಿ.ಕೆ ಸುರೇಶ್
ಇನ್ನೂ ತನ್ನ ಬಳಿ ಹಣ ಪಡೆದು ಮೋಸ ಮಾಡಿದ್ದಾಳೆ, ಅಲ್ಲದೆ ಬೇರೆಯೊಬ್ಬನ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ ಎಂದು ಮನೆಯವರಿಗೆ ಕೂಡ ಮೆಸೇಜ್ ಮಾಡಿದ್ದಾನೆ. ಸಾಕಷ್ಟು ಬಾರಿ ಹೇಮಲತಾ ಜೊತೆ ಮಾತನಾಡಿದ್ದಾನೆ. ಆದರೆ, ಕ್ಯಾರೇ ಮಾಡದೆ ತನ್ನ ಗಂಡನಿಗೆ ಹೇಳಿ ಧಮ್ಕಿ ಹಾಕಿಸಿ ಬೆದರಿಕೆ ಹಾಕಿದ್ದಾಳೆ ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದಿದ್ದಕ್ಕೆ ಮಾಡ್ಕೊ ನನಗೆ ಮಾದನಾಯಕನಹಳ್ಳಿ ಪೊಲೀಸ ಅಲ್ಲಿ ಹಣ ಕೊಟ್ಟು ಎಸ್ಕೇಪ್ ಆಗ್ತೇನೆ ಅಲ್ಲಿ ತಿಮ್ಮಯ್ಯಗೆ ತುಂಬಾ ಇನ್ಪುಲೆಯೆನ್ಸ್ ಎಂದು ಹೇಮಲತಾ ಹೇಳಿದ್ದಾರೆ. ನನಗೆ ಮಾದನಾಯಕನಹಳ್ಳಿ ಪೋಲಿಸರು ಹಣಕೊಸ್ಕರ ನನ್ನ ಸಾವನ್ನು ಮುಚ್ಚಿ ಹಾಕಬೇಡಿ ಈ ನೀಚ ಹೆಂಗಸಿಗೆ ಜೈಲಿಗೆ ಕಳುಹಿಸಿ ಎಂದು ಡೆತ್ ನೋಟ್ ಬರೆದಿದ್ದಾನೆ.
ಇನ್ನೂ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದು ಮರಣೋತ್ತರ ಪರೀಕ್ಷೆ ನಂತರ ಹಸ್ತಾಂತರ ಮಾಡಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಹೇಮಲತಾ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಹಾಗಾದ್ರೆ ಹೇಮಲತಾ ಜೊತೆ ಆತ ಸಲುಗೆಯಿಂದ ಇದ್ದದು ನಿಜನಾ? ಆಕೆಯ ಗಂಡ ಧಮ್ಕಿ ಹಾಕಿದ್ದು ನಿಜನಾ ಅನ್ನೋದು ಪೋಲಿಸರ ತನಿಖೆಯಿಂದ ತಿಳಿದುಬರಬೇಕಿದೆ.