Wednesday, January 15, 2025

ಕಿಲ್ಲರ್ ಕೊರೊನಾಗೆ ಬೆಚ್ಚಿಬಿದ್ದ ಕಡಲನಗರಿ..!! ಎಎಸ್ಐ ಸೇರಿ ಒಟ್ಟು 8 ಮಂದಿ ಬಲಿ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ಆತಂಕ ಹೆಚ್ಚಿಸುತ್ತಲೇ ಇದ್ದು, ಇಂದು ಒಂದೇ ದಿನ 8 ಮಂದಿ ಕೊರೊನಾಗೆ ಬಲಿಯಾಗಿರುವ ವಿಚಾರ ಕಡಲನಗರಿಯಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಪ್ರತಿದಿನ‌ ನೂರಕ್ಕೂ ಹೆಚ್ಚು ಸಂಖ್ಯೆಯ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಸಾವಿನ ಸಂಖ್ಯೆಯು ಏರುತ್ತಲೇ ಇದೆ. ಇಂದು ಎಂಟು ಮಂದಿ ಬಲಿಯಾದರೆ, 139 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿದೆ. ಇಂದು ಸಾವನ್ನಪ್ಪಿದವರಲ್ಲಿ ಓರ್ವ CISF ಅಧಿಕಾರಿಯೂ ಸೇರಿದ್ದಾರೆ. ಮಂಗಳೂರು ಹೊರವಲಯದ ಪಣಂಬೂರು ಬಳಿಯ MRPL ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ CISF ಎಎಸ್ಐ ಕೆಬಿ ಪ್ರೇಮ್ ಶಾ ಮಧುಮೇಹದಿಂದ ಬಳಲುತ್ತಿದ್ದು, ಕೊರೊನಾ ಸೋಂಕಿಗೆ ತುತ್ತಾದ ಪರಿಣಾಮ ಬಲಿಯಾಗಿದ್ದಾರೆ. ಇನ್ನು ಇಂದು ಸಾವೀಗೀಡಾದವರಲ್ಲಿ 7 ಮಂದಿ ಪುರುಷರಾಗಿದ್ದು, ಓರ್ವ ಮಹಿಳೆ ಸೇರಿದ್ದಾರೆ. ಆರು ಮಂದಿ 50 ಕ್ಕಿಂತ ಹೆಚ್ಚಿನ ವಯಸ್ಕರಾದರೆ, ಓರ್ವ 48 ಹಾಗೂ ಇನ್ನೋರ್ವ 35 ವಯಸ್ಸಿನ ಯುವಕನಾಗಿದ್ದಾರೆ.‌ ಇನ್ನು ಒಟ್ಟು ಸೋಂಕಿತರ ಸಂಖ್ಯೆ 1848 ಕ್ಕೆ ಏರಿದ್ದರೆ, ಅದರಲ್ಲಿ 1057 ಪ್ರಕರಣಗಳು ಸಕ್ರಿಯವಾಗಿದ್ದು ಆತಂಕ ಹೆಚ್ಚಿಸಿದೆ.

RELATED ARTICLES

Related Articles

TRENDING ARTICLES