ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ಕಿಚ್ಚಿನ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದು. ಕ್ಯಾಬಿನೆಟ್ ಸಭೆಯಲ್ಲಿ ಕೈಕೈ ಮಿಲಾಯಿಸು ಹಂತಕ್ಕೆ ಹೋಗಿದೆ. ಸಿದ್ದರಾಮಯ್ಯನವರು ಜಾತಿ ಜಾತಿಗಳನ್ನು ಹೊಡೆಯುತ್ತಿದ್ದಾರೆ ಎಂದು ಹೇಳಿದರು.
ಜಾತಿ ಗಣತಿ ಕುರಿತು ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ಇದರ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು. ‘ಲಿಂಗಾಯತರು, ಒಕ್ಕಲಿಗರು, ತಿಗಳರು, ಮುಸ್ಲಿಂರು ಪ್ರತ್ಯೇಕ ಗಣತಿ ಮಾಡ್ತೀವಿ ಅಂತಿದ್ದಾರೆ, ಹಾಗಿದ್ದರೆ ಸರ್ಕಾರ ಯಾಕೆ ಬೇಕು. ಅವರು ಮಾಡಿರೋ ವರದಿಯನ್ನ ಮೂಲೆಯಲ್ಲಿ ಬಿಸಾಕಿ. ಲಿಂಗಾಯತ, ಒಕ್ಕಲಿಗ ಸಚಿವರಿಗೆ ಮಾನ ಮರ್ಯಾದೆ ಇರಬೇಕು ಅಂದ್ರೆ ಜನರ ಕಡೆ ಇರಬೇಕು. ಇಲ್ಲ ಅಂದರೆ ಸಿದ್ದರಾಮಯ್ಯ ಅವರ ನಾಟಕ ಕಂಪನಿ ಕಡೆ ಇರಬೇಕು. ಎರಡು ಕಡೆ ಇರ್ತೀವಿ ಅಂದ್ರೆ ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ.
ಇದನ್ನೂ ಓದಿ :ಪಂದ್ಯ ಸೋತು ಬೇಸರದಲ್ಲಿದ್ದ ಇಶಾನ್ ಕಿಶಾನ್ರನ್ನು ಸಮಾಧಾನ ಪಡಿಸಿದ ನೀತಾ ಅಂಭಾನಿ
ಜಾತಿ ಜನಗಣತಿ ವರದಿಯನ್ನ ಕಾಂಗ್ರೆಸ್ ಪಾರ್ಟಿಯಲ್ಲೇ ಜನರು ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಅವರಿಗೂ ಈ ವರದಿ ಜಾರಿಗೆ ಮಾಡಲು ಇಷ್ಟ ಇಲ್ಲ. ಆದರೆ ತಮ್ಮ ಕುರ್ಚಿಯನ್ನ ಉಳಿಸಿಕೊಳ್ಳಲು ಈ ವರದಿ ಜಾರಿ ಮಾಡಲು ಯತ್ನಿಸುತ್ತಿದ್ದಾರೆ. ಈಗಲೂ ರಾಹುಲ್ ಗಾಂಧಿ & ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಅಂತ ಘೋಷಣೆ ಮಾಡಲಿ. ಈ ವರದಿಯನ್ನ ಮೂಲೆ ಗುಂಪು ಮಾಡ್ತಾರೆ.
ಮುಂದಿನ ತಿಂಗಳು 2ನೇ ತಾರೀಕು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಲ್ಲೂ ಏನು ಆಗಲ್ಲ. ಸಿಎಂ ಸಿದ್ದರಾಮಯ್ಯ ಜಾತಿಗಳನ್ನು ಹೊಡೆದು ಹಾಕುತ್ತಿದ್ದಾರೆ. ಆದರೆ ಮುಸ್ಲಿಂರನ್ನು ಮಾತ್ರ ದೃಷ್ಟಿಬೊಟ್ಟಿನಂತೆ ಪಕ್ಕದಲ್ಲಿ ಇಟ್ಟುಕೊಂಡಿದ್ದಾರೆ. ನಿನ್ನೆ ಕ್ಯಾಬಿನೆಟ್‌ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಇದನ್ನೂ ಓದಿ :ಶೀತ ಆಗಿದೆ ಎಂದು ಆಸ್ಪತ್ರೆಗೆ ಬಂದಿದ್ದ 5 ವರ್ಷದ ಬಾಲಕನಿಗೆ ಸಿಗರೇಟ್ ಸೇದಿಸಿದ ವೈದ್ಯ
ಸಿದ್ದರಾಮಯ್ಯರನ್ನು ಐದು ವರ್ಷ ಸಿಎಂ ಎಂದು ಹೇಳಿದರೆ. ಈ ವರದಿ ಹಾಗೆ ವಾಪಸ್ ಹೋಗಲಿದೆ. ಸಿದ್ದರಾಮಯ್ಯಗೂ ಈ ವರದಿ ಬೇಕಿಲ್ಲ. ಆದರೆ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ವರದಿ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಸೀಟು ಉಳಿದರೆ ಇದೆಲ್ಲಾ ಅವರು ಮಾಡಲ್ಲ. ಸೀಟು ಉಳಿದಿಲ್ಲ ಎಂದರೆ ಈ ಗಣತಿ ವಿಷ ಬೀಜ ಬಿತ್ತುತ್ತಲೆ ಇರುತ್ತಾರೆ. ಜಾತಿ ಒಡೆಯುತ್ತಲೆ ಇರುತ್ತಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.