ಗುರುಗ್ರಾಮ : ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಗಗನಸಖಿ ಮೇಲೆ ಆಸ್ಪತ್ರೆ ಸಿಬ್ಬಂದಿ ಲೈಂಗಿಕ ಸೌರ್ಜನ್ಯವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೋಗಿಯನ್ನು ಗುಣಪಡಿಸಬೇಕಾದವರೇ ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದು, ಇದೀಗ ಈ ಘಟನೆಗೆ ಭಾರೀ ಆಕ್ರೋಶ ಹೊರಹಾಕಲಾಗಿದೆ.
ವಿಮಾನದ ಗಗನಸಖಿ ಹುದ್ದೆಯ ತರಭೇತಿಗೆ ಎಂದು ಯುವತಿ ಗುರುಗ್ರಾಮಕ್ಕೆ ಬಂದಿದ್ದಳು. ಇವರು ಉಳಿದುಕೊಳ್ಳಲು ಹೋಟೆಲ್ವೊಂದನ್ನು ಇವರಿಗೆ ನೀಡಲಾಗಿತ್ತು. ಹೋಟೆಲ್ನ ಈಜುಕೊಳದಲ್ಲಿ ಯುವತಿ ಮುಳುಗಿ ಸಾಯುವ ಹಂತಕ್ಕೆ ತಲುಪಿದ್ದಳು. ಯುವತಿಯನ್ನು ತುರ್ತು ಆರೈಕೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ :ಕಿಚ್ಚ ಸುದೀಪ್ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್ ಶುರು: ಫಸ್ಟ್ ಲುಕ್ ರಿವೀಲ್
ಆದರೆ ಏಪ್ರೀಲ್ 6ರಂದು ಯುವತಿ ಆರೋಗ್ಯ ತೀವ್ರವಾಗಿ ಹದಗೆಡ್ಡ ಕಾರಣ ಆಕೆಯ ಪತಿ ಸದರ್ ಪ್ರದೇಶದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸಿದ್ದರು. ಯುವತಿ ಪ್ರಜ್ಞಾಹೀನಳಾಗಿ, ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದರು ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ ಈ ಘಟನೆ ನಡೆದರು ನನಗೆ ಎಚ್ಚರವಾದರೂ ಕೂಗಿಕೊಳ್ಳಲೂ ಅಥವ ಓಡಲು ಸಾಧ್ಯವಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನು ಯುವತಿಯನ್ನು ಏಪ್ರಿಲ್ 13 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿ ಮನೆಗೆ ಕಳುಹಿಸಿದ್ದು. ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ಘಟನೆ ಬಗ್ಗೆ ತಿಳಿದ ಪತಿ 112 ಮೂಲಕ ಪೊಲೀಸರನ್ನು ಸಂಪರ್ಕಿಸಿ, ಕಾನೂನು ಸಲಹೆಗಾರರ ಸಹಾಯದಿಂದ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಅನಾಥವಾಗಿ ಬಿದ್ದಿದೆ ಅತ್ಯಾಚಾರಿಯ ಶವ; ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದ ಪೊಲೀಸರು
ಘಟನೆ ಬಗ್ಗೆ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು. ನಾವು ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ, ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ ಮತ್ತು ಆಸ್ಪತ್ರೆ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.