ಬೆಂಗಳೂರು : ಮೆಟ್ರೋ ಕಾಮಗಾರಿ ನಿರ್ಲಕ್ಷ್ಯಕ್ಕೆ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು. ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೈಡಕ್ಟ್ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿದ್ದಾನೆ. ಆದರೆ ಈ ದುರ್ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕನೊಬ್ಬ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ಏಪೋರ್ಟ್ ಮಾರ್ಗದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಎಂದು 18 ಚಕ್ರದ ದೊಡ್ಡ ಲಾರಿಯಲ್ಲಿ ವೈಡಕ್ಟ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲು ಕ್ರಾಸ್ ಬಳಿಯ ತಿರುವಿನಲ್ಲಿ ಕಾರಿ ತುಂಡಾಗಿದ್ದು. ಪರಿಣಾಮ ಲಾರಿಯಲ್ಲಿದ್ದ ಬೃಹತ್ ವಯಾಡೆಕ್ಟ್ ಪಕ್ಕದಲ್ಲಿದ್ದ ಪ್ಯಾಸೆಂಜರ್ ಆಟೋ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಆಟೋದಲ್ಲಿದ್ದ ಪ್ರಯಾಣಿಕ ತಕ್ಷಣವೇ ಆಟೋದಿಂದ ಕೆಳೆಗೆ ಇಳಿದಿದ್ದು. ಆಟೋ ಚಾಲಕ ಇಳಿಯುವಷ್ಟರಲ್ಲಿ ವೈಡಕ್ಟ್ ಉರುಳಿ ಬಿದ್ದಿದೆ. ವೈಡಕ್ಟ್ ಉರುಳಿ ಬಿದ್ದ ರಭಸಕ್ಕೆ ಆಟೋ ಅಪ್ಪಚ್ಚಿಯಾಗಿದ್ದು. ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಅತ್ತೆ-ಮಾವನ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ
ರಸ್ತೆಯನ್ನು ಬ್ಲಾಕ್ ಮಾಡದೇ, ಸೆಕ್ಯುರಿಟಿ ಇಲ್ಲದೆ ಆಗೇಯೆ ಲಾರಿಯನ್ನು ತೆಗೆದುಕೊಂಡು ಬಂದಿದ್ದಕ್ಕೆ ಅನಾಹುತವಾಗಿದೆ ಎಂದು ಆರೋಪಿಸಿದ್ದು. ವೈಡಕ್ಟ್ ಸಾಗಿಸುತ್ತಿದ್ದ ಲಾರಿ ಒನ್ವೇನಲ್ಲಿ ಬಂದಿದ್ದೆ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು. ಪರಿಹಾರಕ್ಕೆ ಆಗ್ರಹಿಸಿ ಬಿಎಂಆರ್ಸಿಎಲ್ ಮತ್ತು ಗುತ್ತಿಗೆ ಕಾಮಗಾರಿ ಪಡೆದುಕೊಂಡಿರುವ NCC ಕಂಪನಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ :ಕೇವಲ 26ರನ್ ಗಳಿಸಿದರು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ಧೋನಿ
ಇನ್ನು ಮೃತ ವ್ಯಕ್ತಿಯನ್ನು 35 ವರ್ಷದ ಕಾಸೀಂ ಸಾಬ್ ಎಂದು ಗುರುತಿಸಿದ್ದು. ಕಾಸಿಂ ಸಾಬ್ ಕುಟುಂಬ ಸಮೇತವಾಗಿ ಹೆಗ್ಡೆ ನಗರದಲ್ಲಿ ವಾಸವಾಗಿದ್ದನು. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.