ಬೆಂಗಳೂರು : ಮೂಡ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಯುಕ್ತ ನೀಡಿರುವ ಕ್ಲೀನ್ಚಿಟ್ ಪ್ರಶ್ನಿಸಿಕೊಂಡು ಸ್ನೇಹಮಯಿ ಕೃಷ್ಣ ನ್ಯಾಯಾಲಯದ ಮೆಟ್ಟಿಲೇರಿದ್ದು.ತಕರಾರು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತಗೆ ತನಿಖೆ ಮುಂದುವರಿಸಲು ಆದೇಶಿಸಿದ್ದು. ಲೋಕಾಯುಕ್ತ ತನಿಖೆ ಪೂರ್ಣವಾಗದ ಹಿನ್ನಲೆ ಲೋಕಾಯುಕ್ತ ನೀಡಿರುವ ಬಿ ರಿಪೋರ್ಟ್ ಕುರಿತು ಆದೇಶ ನೀಡಲು ನಿರಾಕರಿಸಿದೆ.
ಜೊತೆಗೆ ಮೇ.7ರ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತಗೆ ಕಾಲವಕಾಶ ನೀಡಿದ್ದು. EDಗೆ ಕೂಡ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಇದನ್ನೂ ಓದಿ :ಜಾತಿ ಜನಗಣತಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ: ಶಾಸಕ ರವಿ ಗಣಿಗ
ಏನಿದು ಪ್ರಕರಣ..!
ಸಿಎಂ ಸಿದ್ದರಾಮಯ್ಯ ಪತ್ನಿಗೆ ಅರಿಶಿಣ ಕುಂಕುಮದ ರೀತಿಯಲ್ಲಿ ಬಂದಿದ್ದ 3.14 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದ ಮುಡಾ. ಅದಕ್ಕೆ ಪರಿಹಾರವಾಗಿ ಮೈಸೂರಿನ ಪ್ರತಿಷ್ಟಿತ ವಿಜಯನಗರ ಬಡಾವಣೆಯಲ್ಲಿ 14 ನಿವೇಶನಗಳನ್ನು ನೀಡಿತ್ತು. ಸಿಎಂ ಸಿದ್ದರಾಮಯ್ಯನರು ತಮ್ಮ ಪ್ರಭಾವ ಬಳಸಿ ಈ ನಿವೇಶನಗಳನ್ನು ಪಡೆದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಾಜ್ಯಪಾಲರಿಗೆ ತನಿಖೆ ನಡೆಸಲು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ :ಜಾತಿ ಜನಗಣತಿ ವರದಿಗೆ ವಿರೋಧ; ಒಕ್ಕಲಿಗರಿಂದ ತೀವ್ರ ಹೋರಾಟದ ಎಚ್ಚರಿಕೆ
ರಾಜ್ಯಪಾಲರು ಲೋಕಾಯುಕ್ತ ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ಸಂಪೂರ್ಣ ತನಿಖೆ ನಡೆಸಿದ ಲೋಕಾಯುಕ್ತ ಈ ಪ್ರಕರಣದಲ್ಲಿ ಸಿಎಂ ಮತ್ತು ಅವರ ಕುಟುಂಬದ ಹಸ್ತಕ್ಷೇಪವಿಲ್ಲ ಎಂದು ಕ್ಲೀನ್ಚಿಟ್ ನೀಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.