ಬೆಂಗಳೂರು: ರಾಜ್ಯದಲ್ಲಿ ಜಾತಿ ಜನಗಣತಿ ವರದಿ ದಿನದಿಂದ ದಿನಕ್ಕೆ ಕಿಚ್ಚೆಬ್ಬಿಸುತ್ತಿದ್ದು. ಇದೀಗ ರಾಜ್ಯ ಒಕ್ಕಲಿಗರ ಸಂಘ ಈ ವರದಿ ಜಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು. ಒಂದು ವೇಳೆ ವರದಿ ಜಾರಿ ಆದರೆ ಸರ್ಕಾರವನ್ನು ಬೀಳಿಸಿ. ಕರ್ನಾಟಕ ಬಂದ್ ರೀತಿಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಾತಿಜನಗಣತಿ ವರದಿಯ ಬಗ್ಗೆ ಒಕ್ಕಲಿಗರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು. ಈ ಕುರಿತು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, “ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಆದರೆ ಅದರ ವಿರುದ್ದ ಹೋರಾಟ ಮಾಡಲು ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಮುಂದಿನ ಹಂತದಲ್ಲಿ ಯಾವ ರೀತಿ ಹೊಇರಾಟ ಮಾಡುವುದರ ಕುರಿತು ಇಂದು ಚರ್ಚಿಸಲಾಗಿದೆ. ಕಾಂತರಾಜು ಅವರ ವರದಿ ಆರೋಗ್ಯಕರವಾಗಿಲ್ಲ, 10ವರ್ಷದ ಹಿಂದೆ ಮಾಡಿದ ವರದಿಯನ್ನ ಜಾರಿಗೊಳಿಸಲು ಮುಂದಾಗಿದೆ. ಈ ವರದಿಯಲ್ಲಿ ಒಕ್ಕಲಿಗ ಜನಾಂಗವನ್ನ ಕೇವಲ 61ಲಕ್ಷ ತೋರಿಸಲಾಗಿದೆ.
ಇದನ್ನೂ ಓದಿ :ಬದುಕಿರುವಾಗಲೇ ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ
ಆದರೆ ಒಂದೊಂದು ತಾಲೂಕಲ್ಲೂ 60 ಸಾವಿರದಿಂದ 1ಲಕ್ಷಕ್ಕೂ ಅಧಿಕ ಒಕ್ಕಲಿಗ ಸಮುದಾಯದ ಜನರಿದ್ದಾರೆ. ಆದರೆ ಈ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಇದು ಬೇರೆ ಜನಾಂಗಕ್ಕೆ ಮೀಸಲಾತಿ ನೀಡುವ ಉದ್ದೇಶದಿಂದ ಮಾಡುವ ಹುನ್ನಾರ. ಹೀಗಾಗಿ ನಾವು ಕರ್ನಾಟಕ ಬಂದ್ ಮಾಡುವುದರ ಮೂಲಕ ಹೋರಾಟ ಮಾಡಬೇಕಾಗುತ್ತೆ. ಜಾತಿ ಜನಗಣತಿ ವರದಿಯಲ್ಲಿ ಸಾಕಷ್ಟು ಜನಾಂಗಕ್ಕೆ ಅನ್ಯಾಯವಾಗಿದೆ.
ಹೀಗಾಗಿ ಇದನ್ನು ಮರುಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.