Tuesday, April 22, 2025

ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

ಅಮರಾವತಿ : ಕ್ರೂರಿ ಪತಿಯೊಬ್ಬ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದ್ದು. ಕೌಟುಂಬಿಕ ಕಲಹಕ್ಕೆ ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು 27 ವರ್ಷದ ಅನುಷಾ ಎಂದು ಗುರುತಿಸಲಾಗಿದೆ. ಕೊಲೆಪಾತಕಿ ಗಂಡನನ್ನು ಜ್ಞಾನೇಶ್ವರ್ ಎನ್ನಲಾಗಿದೆ.

ಇದನ್ನೂ ಓದಿ :ಅಳುತ್ತಿದ್ದ ಮಕ್ಕಳಿಗೆ ಚಾಕ್ಲೆಟ್​ ತರಲು ಅಂಗಡಿಗೆ ಹೋಗಿದ್ದ ಮಹಿಳೆಗೆ ಕಾರ್​ ಡಿಕ್ಕಿ; ಸ್ಥಳದಲ್ಲೆ ಸಾ*ವು

ಆಂಧ್ರಪ್ರದೇಶದ, ವಿಶಾಖಪಟ್ಟಣದ ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಮೃತ ಅನುಷಾ ಮತ್ತು ಜ್ಞಾನೇಶ್ವರ್​ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಸಂಸಾರವೂ ಚೆನ್ನಾಗಿಯೇ ನಡೆಯುತ್ತಿತ್ತು. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ದಂಪತಿಗಳ ನಡುವೆ ಹಲವಾರು ವಿಷಗಳಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಇದೇ ವಿಚಾರಕ್ಕೆ (ಏ.14) ದಂಪತಿಗಳ ನಡುವೆ ನೆನ್ನೆ ಜಗಳವಾಗಿದ್ದು. ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದಂರ್ಭದಲ್ಲಿ ಅನುಷಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಪತಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗೆ ಅನುಷಾಳ ಪ್ರಾಣಪಕ್ಷಿ ದೇಹ ತ್ಯಜಿಸಿ ಹಾರಿಹೋಗಿತ್ತು.

ಇದನ್ನೂ ಓದಿ :ಮೊಬೈಲ್​ ವಿಚಾರಕ್ಕೆ ಜಗಳ; ತಂದೆಯ ಎದೆಗೆ ಚೂರಿ ಹಾಕಿದ ಮಗ

ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES