ಹಾಸನ : ಮನೆಯಲ್ಲಿ ಮಕ್ಕಳು ಅಳುತ್ತಿದ್ದಾರೆ ಎಂದು ಚಾಕ್ಲೆಟ್ ಮತ್ತು ಬಿಸ್ಕೆಟ್ ತರಲು ಅಂಗಡಿಗೆ ತೆರಳುತ್ತಿದ್ದ ಮಹಿಳೆಗೆ ಇನೋವ್ ಕಾರ್ ಡಿಕ್ಕಿಯಾಗಿದ್ದು. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಗುಲಾಬಿ ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯಲ್ಲಿ ಘಟನೆ ನಡೆದಿದ್ದು. ಮಕ್ಕಳು ಅಳುತ್ತಿದ್ದಾರೆ ಎಂದು ಮಹಿಳೆ ಗುಲಾಬಿ ಚಾಕ್ಲೆಟ್, ಬಿಸ್ಕೆಟ್ ತರಲು ಅಂಗಡಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಹಿಳೆ ಗುಲಾಬಿ ಡಿವೈಡರ್ ದಾಟಿ ಅಂಗಡಿಗೆ ತೆರಳುವ ವೇಳೆ ಇನ್ನೋವ ಕಾರ್ ಡಿಕ್ಕಿಯಾಗಿದ್ದು. ಡಿಕ್ಕಿಯ ರಭಸಕ್ಕೆ ಮಹಿಳೆ ಹಾರಿ ಬಿದ್ದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ :ಮೊಬೈಲ್ ವಿಚಾರಕ್ಕೆ ಜಗಳ; ತಂದೆಯ ಎದೆಗೆ ಚೂರಿ ಹಾಕಿದ ಮಗ
KA-05-AH-0576 ನಂಬರ್‌ನ ಇನೊವಾ ಕಾರು ಡಿಕ್ಕಿಯಾಗಿದ್ದು. ಅಪಘಾತವಾದರು ಕಾರು ಚಾಲಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಘಟನಾ ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.