ಹಾಸನ : ಕೇರಳ ಮೂಲದ ಯುವಕನನ್ನ ಒಂಟಿ ಸಲಗವೊಂದು ಅಟ್ಟಾಡಿಸಿರೋ ಭಯಾನಕ ವೀಡಿಯೋ ಒಂದು ವೈರಲ್ ಆಗಿದ್ದು. ವೀಡಿಯೋದಲ್ಲಿ ಎದ್ನೋ ಬಿದ್ನೋ ಎಂದು ಓಡಿ ಯುವಕ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಕಾಡಾನೆ ಸಮಸ್ಯೆಯಿಂದ ಕಂಗೆಟ್ಟಿರೋ ಮಲೆನಾಡಿಗರು ಈ ವೀಡಿಯೋ ನೋಡಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಕಾಡಾನೆಯೊಂದು ಯುವಕನನ್ನು ಅಟ್ಟಾಡಿಸಿದೆ. ಕಳೆದೆರಡು ದಿನಗಳ ಹಿಂದೆ ಬೆಳ್ಳೂರು ಗ್ರಾಮದಲ್ಲಿ ಡರ್ಟ್ ಕಾರ್ರೇಸ್ ಆಯೋಜನೆ ಮಾಡಲಾಗಿತ್ತು. ಈ ರೇಸ್ಗೆ ರಾಜ್ಯ ಮಾತ್ರವಲ್ಲದೆ, ಬೇರೆ ರಾಜ್ಯಗಳಿಂದಲೂ ಸ್ಪರ್ಧಾಥಿಗಳು ಬಂದಿದ್ದರು. ಈ ರೇಸ್ನಲ್ಲಿ ಕೇರಳದ ಯುವಕನೊಬ್ಬನೂ ಭಾಗವಹಿಸಿದ್ದ. ಇದನ್ನೂ ಓದಿ :ಕುಮಾರಸ್ವಾಮಿ ಸಿಎಂ ಆಗಲು ನಮ್ಮ ಮುಂದೆ ಕೈಕಟ್ಟಿ ನಿಂತಿದ್ದರು; ಚೆಲುವರಾಯಸ್ವಾಮಿ
ಈ ಯುವಕ ಡರ್ಟ್ ರೇಸ್ ನಡೆಯುವ ವೇಳೆ ಮೂತ್ರ ವಿಸರ್ಜನೆಗೆ ಎಂದು ಕಾಡೊಳಗೆ ಓಗಿದ್ದು. ಈ ವೇಳೆ ಒಂಟಿ ಕಾಡಾನೆಯೊಂದು ಈತನ ಮೇಲೆ ಎರಗಿದೆ. ಆನೆ ಬರುತ್ತಿರುವುದನ್ನು ನೋಡಿದ ಯುವಕ ಪ್ರಾಣ ಉಳಿಸಿಕೊಳ್ಳಲು ದಿಕ್ಕೆಟ್ಟು ಓಡಿದ್ದಾನೆ. ಈ ವೇಳೆ ಇದನ್ನು ನೋಡಿದ ಯುವಕನ ಸ್ನೇಹಿತರು ಜೋರಾಗಿ ಕಿರುಚಿ. ವಾಹನದ ಹಾರ್ನ್ ಶಬ್ದವನ್ನು ಜೋರು ಮಾಡಿದ್ದಾರೆ. ಈ ವೇಳೆ ಯುವಕ ಅಲ್ಲೇ ಇದ್ ಗುಂಡಿಯೊಳಗೆ ನೆಗೆದು ಪ್ರಾಣ ಉಳಿಸಿಕೊಂಡಿದ್ದಾನೆ. ಈ ಘಟನೆ ದೃಷ್ಯ ಅಲ್ಲಿದ್ದವರ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ :ಮನೆಯಲ್ಲಿ ಪ್ರೀತಿಗೆ ವಿರೋಧ; ಅಂಬೇಡ್ಕರ್ ಪ್ರತಿಮೆ ಎದುರು ನವಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
ಹಾಸನ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಾದ ಬೇಲೂರು, ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆ ಹಾವಳಿ ಯಿಂದ ಈಗಾಗಲೇ ಜನ ತತ್ತರಿಸಿಹೋಗಿದ್ದು ಈ ದೃಶ್ಯ ಕಂಡು ಮತ್ತಷ್ಟು ಕಂಗಾಲಾಗಿದ್ದಾರೆ. ಅನೇಕ ಬಾರಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಹೋರಾಟಗಳು ನಡೆದಿದ್ದು ಏನೂ ಪ್ರಯೋಜನ ಆಗಿಲ್ಲ. ಕೇವಲ ಕಾಡಾನೆ ದಾಳಿಯಾದಾಗ ಸಾಂತ್ವಾನ ಹೇಳೋದಕ್ಕೆ ಬಂದು ಅಬ್ಬರಿಸೋ ಜನಪ್ರತಿನಿಧಿಗಳು ಪ್ರತಿನಿತ್ಯ ಬದುಕಿನ ಸಮಸ್ಯೆಯಾಗಿರೋ ವಿಚಾರವನ್ನ ನಿರ್ಲಕ್ಷ್ಯ ಮಾಡಿರೋದಕ್ಕೆ ಇಲ್ಲಿನ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.