Wednesday, April 16, 2025

ಆಧುನಿಕ ವಿಜ್ಞಾನಕ್ಕೂ ಸವಾಲಾಗಿ ನಿಂತಿದೆ ಈ ಬಂಡೆ; ಇದರ ಹಿಂದಿದೆ ಶ್ರೀ ಕೃಷ್ಣನ ಪವಾಡ

ಒಂದು ಚೆಂಡನ್ನು ಮೇಲಕ್ಕೆಸದರೆ ಅದು ಕೆಳಗೆ ಬೀಳುತ್ತದೆ, ಅದೇ ರೀತಿ ಒಂದು ಇಳಿಜಾರಿನಲ್ಲಿ ವೃತ್ತಾಕಾರದ ವಸ್ತುವನ್ನು ಉರುಳಿಸಿದರೆ ಅದು ಕೆಳಗೆ ಉರುಳಿ ಬೀಳುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಗುರುತ್ವಾಕರ್ಷಣೆ ಎಂದು ಕರೆಯುತ್ತೇವೆ. ಆದರೆ ತಮಿಳುನಾಡಿನ ಮಹಾಬಲಿಪುರಂನಲ್ಲಿ 250 ಟನ್​ ತೂಕದ ನಿಗೂಢ ಬಂಡೆ ಇದ್ದು. ಇದು ವೈಜ್ಞಾನಿಕ ಗುರುತ್ವವನ್ನು ಧಿಕ್ಕರಿಸಿ ನಿಂತಿದ್ದು. ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ.

ಈ ಬಂಡೆಗೆ ಸುಮಾರು 1200 ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ ಎಂದು ನಂಬಲಾಗಿದ್ದು. ಈ ಬಂಡೆ ಸುಮಾರು 20 ಅಡಿ ಎತ್ತರವಿದ್ದು, 5 ಮೀಟರ್​ ಅಗಲವಿದೆ. ಬೆಟ್ಟದ ಇಳಿಜಾರಿನಲ್ಲಿ ಈ ಬಂಡೆ ಉರುಳದೆ ನಿಂತಿದೆ. ಅಷ್ಟೆ ಅಲ್ಲದೆ  ಈ ಬಂಡೆಯ ಬುಡ ಕೇವಲ 4 ಅಡಿಗಿಂತ ಕಡಿಮೆ ಇದ್ದು. ಈ ರೀತಿ ಇದು ನಿಲ್ಲಲು ಕಾರಣವಾಗಿರುವ ಅಂಶ ಏನು ಎಂಬ ಬಗ್ಗೆ ಇಂದಿಗೂ ಗೊಂದಲ ಇದೆ.

ಇದನ್ನೂ ಓದಿ :ಇಡೀ ದೇಶ ಕಂಡ ನಿಷ್ಠಾವಂತ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ: ಭೈರತಿ ಸುರೇಶ್​

ಕೆಲ ಕಥೆಗಳ ಪ್ರಕಾರ ಬೆಣ್ಣೆ ಪರಮಾತ್ಮ ಶ್ರೀಕೃಷ್ಣನ ನೆಚ್ಚಿನ ಆಹಾರವೆಂದು ನಂಬಲಾಗಿದೆ. ಪುರಾಣದ ಪ್ರಕಾರ ಇಲ್ಲಿರುವ ಬಂಡೆ ಸ್ವರ್ಗದಿಂದ ಬೆಣ್ಣೆಯ ರೂಪದಲ್ಲಿ ಬಿದ್ದಿದೆ. ಆದ್ದರಿಂದ ಇದನ್ನು ಕೃಷ್ಣನ ಚೆಂಡು ಎಂದು ಕರೆಯಲಾಗುತ್ತಿದೆ. ಈ ಬಂಡೆ ಎಷ್ಟು ಸ್ಥಿರವಾಗಿ ನಿಂತಿದೆ ಎಂದರೆ ಪ್ರವಾಸಿಗರು ಇದರ ಕೆಳಗೆ ಆಶ್ರಯ ಪಡೆಯುತ್ತಾರೆ. ಜೊತೆಗೆ ಚಂಡಮಾರುತಗಳು, ಸುನಾಮಿ, ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳಾದರು ಇದು ಅಲುಗಾಡದೆ ನಿಂತಿದೆ ಎಂಬುದು ಆಸಕ್ತಿದಾಯಕ ವಿಷಯವಾಗಿದೆ.

ಇದನ್ನೂ ಓದಿ : ಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ; ನೆಟ್ಟಿಗರಿಂದ ಅಕ್ರೋಶ

ಜೊತೆಗೆ ಬ್ರಿಟಿಷರ ಆಡಳಿತದಲ್ಲಿ ಈ ಬಂಡೆಯನ್ನು ತೆರವುಗೊಳಿಸಲು ಪ್ರಯತ್ನಿಸಲಾಗಿತ್ತು ಎಂದು ಉಲ್ಲೇಖವಿದ್ದು. 1908ರಲ್ಲಿ ಅಂದಿನ  ಮದ್ರಾಸ್​ ಗರ್ವನರ್​ ಆಗಿದ್ದ ಆರ್ಥರ್​ ಲಾಲಿ ಎಂಬಾತ ಈ ಬಂಡೆಯನ್ನು ತೆಗೆದು ಹಾಕಲು ನಿರ್ಧರಿಸಿದ್ದನು. ಒಂದು ವೇಳೆ ಈ ಬಂಡೆ ಉರುಳಿದರೆ  ಈ ಬೆಟ್ಟದ ಕೆಳಗೆ ಇರುವ ಗ್ರಾಮಕ್ಕೆ ಅಪಾಯವಾಗುತ್ತದೆ ಎಂದು ಈತ ಸುಮಾರು 7 ಆನೆಗಳನ್ನು ಕಳುಹಿಸಿ ಈ ಬಂಡೆಯನ್ನು ಸರಿಸಲು ಪ್ರಯತ್ನಿಸಿದ್ದನು. ಆದರೆ ಎಷ್ಟೇ ಪ್ರಯತ್ನಿಸಿದರು ಕೂಡ ಈ ಬಂಡೆಯನ್ನು ಸರಿಸಲಾಗದ ಹಿನ್ನಲೆ ಆರ್ಥರ್​ ಲಾಲಿ ಕೂಡ ಈ ಪ್ರಯತ್ನವನ್ನು ಕೈ ಬಿಟ್ಟಿದ್ದನು. ಜೊತೆಗೆ ಕ್ರಿ,ಶ 630 ರಿಂದ 668ರವರೆಗೆ ದಕ್ಷಿಣ ಭಾರತವನ್ನು ಆಳಿದ್ದ ಪಲ್ಲವರ ರಾಜ ನರಸಿಂಹ ವರ್ಮನ್​ ಈ ಬಂಡೆಯನ್ನು ತೆಗೆದು ಹಾಕಲು ಮೊದಲ ಪ್ರಯತ್ನ ಮಾಡಿದ್ದನು.

ಆದರೆ ಇಷ್ಟು ದೊಡ್ಡ ಇಳಿಜಾರಿನಲ್ಲಿ ಈ ಬಂಡೆ ಉರುಳದೆ ನಿಂತಿರುವುದು ವಿಜ್ಞಾನ ಲೋಕಕ್ಕೆ ಅಚ್ಚರಿಯಾಗಿ ನಿಂತಿದ್ದು. ಗುರುತ್ವಕರ್ಷಣೆಗೆ ಇದು ಚಾಲೆಂಜ್​ ಆಗಿದೆ.

RELATED ARTICLES

Related Articles

TRENDING ARTICLES